

ವಿಜಯಪುರ : ವಿದ್ಯಾರ್ಥಿಗಳು ತಮ್ಮ ಶಿಣದ ಜೊತೆಗೆ ಸಮಾಜದ ಬಗ್ಗೆ ಕಳಕಳಿ, ಆಸಕ್ತಿ ಹೊಂದುವಂಥವರಾಗಿ ಸೇವಾ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು.
ನಗರದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಾಲಯದಲ್ಲಿ ಬುಧವಾರ ಎಬಿವಿಪಿಯ ಆಯಾಮವಾದ ಸ್ಟುಡೆಂಟ್ ಫಾರ್ ಸೇವಾ ವತಿಯಿಂದ ಹಮ್ಮಿಕೊಂಡಿದ್ದ ದ್ವೀತಿಯ ಪಿಯುಸಿ ವಿಾನ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾಜದ ಎಲ್ಲ ೇತ್ರಗಳಿಗೆ ಹೋಗುವ ನೀವುಗಳು ಸಮಾಜದ ಬಗ್ಗೆ ಕಾಳಜಿ ಇಟ್ಟುಕೊಂಡು ಸಮಾಜದಲ್ಲಿರುವ ಬಡ ಮಧ್ಯಮ ವರ್ಗದ ವ್ಯಕ್ತಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯವನ್ನು ಮಾಡಬೇಕು. ನಾವುಗಳು ನಮ್ಮ ಶಿಣದ ಜೊತೆಗೆ ಸಮಾಜ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದರು.
ಎಬಿವಿಪಿ ವಿಭಾಗ ಸಹ ಪ್ರಮುಖ ಡಾ. ಅಮಿತ್ ಕುಮಾರ ಬಿರಾದಾರ ಮಾತನಾಡಿ, ಪ್ರತಿ ವರ್ಷ ಎಬಿವಿಪಿ ವತಿಯಿಂದ ದ್ವೀತಿಯ ಪಿಯುಸಿ ವಿಾನ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಇಟಿ, ನೀಟ್ ತರಬೇತಿಯನ್ನು ಎಬಿವಿಪಿ ನೀಡುತ್ತಾ ಬರುತ್ತಿದೆ. ಇದರ ಮುಂದುವರಿದ ಭಾಗವಾಗಿ ಈ ವರ್ಷ 100 ವಿದ್ಯಾರ್ಥಿಗಳಿಗೆ ಉಚಿತವಾಗಿ ಅವರಿಗೆ ಪುಸ್ತಕಗಳನ್ನು ವಿತರಿಸಲಾಗಿದೆ ಎಂದರು.
ಎಬಿವಿಪಿಯ ಜಿಲ್ಲಾ ಪ್ರಮುಖರಾದ ಎಂ.ಎಸ್. ಬಿರಾದಾರ, ವಿಭಾಗ ಸಂಟನಾ ಕಾರ್ಯದರ್ಶಿ ಹರ್ಷ ನಾಯಕ, ಜಿಲ್ಲಾ ಸಂಚಾಲಕ ಮಂಜುನಾಥ ಹಳ್ಳಿ, ನಗರ ಕಾರ್ಯದರ್ಶಿ ಸಂದೀಪ ಅರಳಗುಂಡಿ, ಸೀಮಾ ಹೊನವಾಡ, ಅಭಿಷೇಕ ಬಿರಾದಾರ, ಬಾಲಾಜಿ ಬಿರಾದಾರ, ಅಭಿಷೇಕ ಬಡಿಗೇರ, ಬಸವರಾಜ ಬಿಜ್ಜರಗಿ, ಸ್ನೇಹಾ ಹಿರೇಮಠ, ಶಿಲ್ಪಾ ಪೂಜಾರಿ, ಚೇತನ ಕೋರವಾರ, ಶಿವಾಜಿ ಬೀದರ್, ನಗರದ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.