

ರಬಕವಿ-ಬನಹಟ್ಟಿ: ಮನುಷ್ಯನಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಮನಸ್ಸಿಟ್ಟು ಮಾಡಿದ ಕಾರ್ಯ ಎಂದಿಗೂ ಸೋಲುವುದಿಲ್ಲ. ಗಮನವಿಟ್ಟು ವಿದ್ಯಾಭ್ಯಾಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ನಿವೃತ್ತ ಶಿಕ್ಷಕ ವಿನೋದ ಸಾಹಿತಿ ಯಶವಂತ ವಾಜಂತ್ರಿ ಹೇಳಿದರು.
ರಬಕವಿ ಎಂ.ವಿ. ಪಟ್ಟಣ್ಣ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವು ಏನನ್ನು ಅಂದುಕೊಳ್ಳುತ್ತೇವೆ ಅದು ಆಗುತ್ತದೆ. ಅದಕ್ಕಾಗಿ ನಾವು ಸಕಾರಾತ್ಮಕ ಆಲೋಚನೆ ಮಾಡಬೇಕು ಎಂದರು.
ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಬೇಕು. ಅಂದಾಗ ಮಾತ್ರ ಅವರ ಸವಾರ್ಂಗೀಣ ಬೆಳವಣಿಗೆಯಾಗುತ್ತದೆ ಎಂದು ಸಮಾರಂಭದ ಅಧ್ಯಕ್ಷತೆವಹಿಸಿದ್ದ ಮುಖ್ಯಶಿಕ್ಷಕ ಬಿ.ಎಸ್. ಪಾಟೀಲ ಹೇಳಿದರು.
ಬಿ.ವಿ. ಅಮ್ಮಲಜೇರಿ, ಆರ್.ಎಸ್. ಬೆಲ್ಲಮ್ಮ, ಪಿ.ಆರ್. ಕೊಣ್ಣೂರ, ಎಂ.ಎ. ಪಾಯೆ, ಅನೀಲ ಹುಲ್ಲೂರ, ಸವಿತಾ ಗಾಯವಾಡ, ಮಂಜುಳಾ ಭಿಲವಡಿ ಇದ್ದರು.