

ವಿಜಯಪುರ: ಯುವಜನತೆ ಸಕಾರಾತ್ಮಕ ಚಿಂತನೆ ಬೆಳೆಸಿಕೊಂಡಾಗ ಮಾತ್ರ ಸಾಧನೆ ಸಾಧ್ಯ ಎಂದು ಪದವಿ ಪೂರ್ವ ಶಿಣ ಇಲಾಖೆ ಉಪನಿರ್ದೇಶಕ ಡಾ. ಸಿ.ಕೆ. ಹೊಸಮನಿ ಹೇಳಿದರು.
ನಗರದ ಬಿಎಲ್ಡಿಇ ಸಂಸ್ಥೆ ಎಸ್ಎಸ್ ಪ.ಪೂ. ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಯಶಸ್ಸನ್ನು ಯಾರೂ ತಂದು ನಮ್ಮ ಬೊಗಸೆಯಲ್ಲಿ ಇಡುವುದಿಲ್ಲ. ಯಶಸ್ಸು ಸಾಧಿಸಲು ನಿರಂತರ ಸಾಧನೆ, ಕಠಿಣ ಪರಿಶ್ರಮ ಅಗತ್ಯ ಎಂದರು.
ಮುಖ್ಯಅತಿಥಿ ಬಿಎಲ್ಡಿಇ ಡೀಮ್ಡ್ ವಿವಿಯ ಪೊ. ಚಾನ್ಸಲರ್ ಡಾ. ವೈ.ಎಂ. ಜಯರಾಜ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನಿರಂತರ ಅಧ್ಯಯನ, ಕ್ರಿಯಾಶೀಲತೆ, ಸತತ ಪರಿಶ್ರಮ, ಶ್ರದ್ಧೆ, ವೃತ್ತಿ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಆಡಳಿತ ಅಧಿಕಾರಿ ಐ.ಎಸ್. ಕಾಳಪ್ಪನವರ ಅಧ್ಯಕ್ಷತೆ ವಹಿಸಿದ್ದರು.
ಪ್ರಾಚಾರ್ಯ ಡಾ. ಜಿ.ಡಿ. ಅಕಮಂಚಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಅಧಿಕಾರಿ ಬಿ.ಆರ್. ಪಾಟೀಲ ಇದ್ದರು. ಪ.ಪೂ. ಶಿಣ ಇಲಾಖೆ ಶಾಖಾಧಿಕಾರಿ ಪ್ರಕಾಶ ಗೋಂಗಡಿ ಅವರನ್ನು ಸನ್ಮಾನಿಸಲಾಯಿತು.
ಬಿ.ಬಿ. ಮನಗೊಂಡ. ಎ.ಆರ್. ಪೋತದಾರ, ಡಿ.ಆರ್. ಖಾನಾಪುರ, ಬಿ.ಟಿ. ಅಂಗಡಿ, ಜೆ. ಎಂ. ಬಿರಾದಾರ, ವೈಶಾಲಿ ಪಾಟೀಲ, ಸುಪ್ರಿಯ ಶೇರಿಕಾರ, ಅಮರೇಶ ಸಾಲಕ್ಕಿ, ಎಸ್.ಆರ್. ಬುಯ್ಯಾರ, ಆರ್.ಡಿ. ತಾಂಬೆ, ಎಸ್.ಎಂ. ಕುಂಬಾರ, ಎಂ.ಟಿ. ದೊಡ್ಡಮನಿ, ಎಂ.ಎಲ್. ಖೈರವ, ವಾಣಿಶ್ರೀ ಮಠ, ಎಸ್.ಎಂ. ಪಾಟೀಲ ಮತ್ತಿತರರಿದ್ದರು.
ಎಸ್.ಟಿ. ತೇಲಕರ ಸ್ವಾಗತಿಸಿದರು. ಜೆ.ಎ. ಬಿರಾದಾರ ನಿರೂಪಿಸಿದರು. ಟಿ.ಎಂ. ಪವಾರ ವಂದಿಸಿದರು.