ಜೀವನದಲ್ಲಿ ದೇಶಾಭಿಮಾನ ಬೆಳೆಸಿಕೊಳ್ಳಿ

20220902_204345
ವಿಜಯಪುರ ನಗರದ ಎನ್.ಸಿ.ಸಿ. ತರಬೇತಿ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತರ್‌ರಾಜ್ಯಮಟ್ಟದ ಭೂಸೇನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಎನ್‌ಸಿಸಿ ಅಭ್ಯರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಾ. ಜಾವಿದ ಜಮಾದಾರ, ಉಪ ವಿಭಾಗಾಽಕಾರಿ ಕ್ಯಾಪ್ಟನ್ ಮಹೇಶಕುಮಾರ ಮಾಲಗಿತ್ತಿ, ಕರ್ನಲ್ ಕೆ.ಎಸ್.ಬಿಸ್ತ, ಸುಬೇದಾರ ಮೇಜರ್ ಕುರಾಂದಲೆ ಮತ್ತಿತರರಿದ್ದರು.
Published on

ವಿಜಯಪುರ : ಜೀವನದಲ್ಲಿ ಏಕತೆ ಮತ್ತು ಶಿಸ್ತು, ದೇಶಾಭಿಮಾನವನ್ನು ಬೆಳೆಸಿಕೊಳ್ಳುವ ಮೂಲಕ ರಾಷ್ಟç ನಿರ್ಮಾಣಕ್ಕೆ ಕೊಡುಗೆ ನೀಡಲು ಯುವಜನತೆ ಮುಂದಾಗಬೇಕು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರ ಫೆಡರೇಶನ್‌ನ ರಾಷ್ಟ್ರೀಯ ಅಧ್ಯಕ್ಷ ಡಾ. ಜಾವಿದ ಜಮಾದಾರ ಹೇಳಿದರು.

ನಗರದ ಎನ್.ಸಿ.ಸಿ. ತರಬೇತಿ ಕೇಂದ್ರದಲ್ಲಿ ೩೬ ಕರ್ನಾಟಕ ಬಟಾಲಿಯನ್ ಎನ್.ಸಿ.ಸಿ.ಹಾಗೂ ಕೇಂದ್ರ ರಕ್ಷಣಾ ಮಂತ್ರಾಲಯ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತರ್‌ರಾಜ್ಯಮಟ್ಟದ ಭೂಸೇನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ಎನ್‌ಸಿಸಿ ತರಬೇತಿಯಿಂದ ಸಾಹಸ, ಪರಿಶೋಧನಾ, ಜಿಜ್ಞಾಸೆ, ತ್ರಾಣ ಸಹಿಷ್ಣುತೆ, ಶಿಸ್ತು, ಧೈರ್ಯ, ಸದೃಢತೆ, ಆತ್ಮವಿಶ್ವಾಸ, ನಿಸ್ವಾರ್ಥ ಸೇವೆ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಲು ಸಹಕಾರಿ ಆಗಿದೆ. ಯುವಕರು ರಾಷ್ಟçದ ಚಿಂತನೆಯೊಂದಿಗೆ ಮುಂದೆ ಸಾಗಬೇಕು. ಜೀವನದ ಎಲ್ಲ ಹಂತಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಭವಿಷ್ಯದ ದೊಡ್ಡ ಸವಾಲುಗಳನ್ನು ಎದುರಿಸಬೇಕು. ದೈಹಿಕ ಸಾಮರ್ಥ್ಯ, ಮನಸ್ಸಿನ ಸಮತೋಲನದೊಂದಿಗೆ ಮುನ್ನುಗ್ಗಿ ನಿಸ್ವಾರ್ಥ ಭಾವದಿಂದ ದೇಶಕ್ಕಾಗಿ ಸೇವೆ ಸಲ್ಲಿಸಲು ಅಣಿಯಾಗಬೇಕೆಂದರು.

ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶಕುಮಾರ ಮಾಲಗಿತ್ತಿ, ಮೈಸೂರಿನ ಕಮಾಂಡಿಂಗ್ ಆಫೀಸರ್ ಕರ್ನಲ್ ಕೆ.ಎಸ್.ಬಿಸ್ತ, ದಾವಣಗೆರೆ ಕಮಾಂಡಿಂಗ್ ಆಫೀಸರ್ ಕರ್ನಲ್ ಮನೀಶ ಆಸ್ತಾನಾ, ಬಳ್ಳಾರಿ ಗ್ರೂಪ್ ಕಮಾಂಡರ್ ಕರ್ನಲ್ ಪುನೀತ ಲೇಹಲ್, ಕರ್ನಲ್ ಶಾಜೀ, ಸುಬೇದಾರ ಮೇಜರ್ ಕುರಾಂದಲೆ, ಫಿಲ್ಮ್ ಸೆನ್ಸಾರ್ ಬೋರ್ಡ್ ಸದಸ್ಯ ರಾಘವೇಂದ್ರ ಗುರಜಾಲ, ಕ್ಯಾಪ್ಟನ್ ಮಹಾಂತೇಶ ಕನ್ನೂರ, ಲೆಫ್ಟಿನೆಂಟ್‌ಗಳಾದ ಗಿರೀಶ ಅಕ್ಕಮಂಚಿ, ಆರ್.ಕೆ. ಬಿದರಕುಂದಿ, ಚೀಪ್ ಆಫೀಸರ್ ವಿ.ಎಂ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಒಂದು ವಾರಗಳ ಕಾಲ ಜರುಗಿದ ಶಿಬಿರದಲ್ಲಿ ಕರ್ನಾಟಕ ಮತ್ತು ಗೋವಾದಿಂದ ೫೦೦ ಎನ್‌ಸಿಸಿ ಅಭ್ಯರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net