

ಬೀಳಗಿ: ವಿದ್ಯಾರ್ಥಿಗಳು ಕಲಿಕೆ ವೃತ್ತಿಯ ಜೊತೆಯಲ್ಲಿ ಸಾಂಸ್ಕೃತಿಕ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯವಾಗಿರಲು ಸಾಧ್ಯ ಎಂದು ಶಾಲಾ ಆಡಳಿತಾಧಿಕಾರಿ ಎಚ್.ಬಿ.ಧರ್ಮಣ್ಣವರ ಹೇಳಿದರು.
ಬಾಡಗಂಡಿಯ ಎಸ್.ಆರ್.ಪಾಟೀಲ ಪ್ರತಿಷ್ಠಾನ ಬಾಪೂಜಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ರಚನೆ ಮತ್ತು ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕರ್ತವ್ಯ ನಿಷ್ಠೆ ಮತ್ತು ಸಮಪ್ರಜ್ಞೆ ಬೆಳೆಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಶಾಲಾ ಸಂಸತ್ತಿನ ಪದಾಧಿಕಾರಿಗಳು ತಮಗೆ ನೀಡಿದ ಜವಾಬ್ದಾರಿಯನ್ನು ಚಾಚು ತಪ್ಪದೆ ಪಾಲನೆ ಮಾಡಬೇಕು ಎಂದರು.
ಶಾಲೆ ಮತ್ತು ಕಾಲೇಜಿನ ಪ್ರಾಂಶುಪಾಲ ಶಿವಭೋದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಂತಾದೇವಿ ಪಾಟೀಲ ಸ್ಮರಣಾರ್ಥ ಆಯುರ್ವೇದ ಮಹಾವಿದ್ಯಾಲಯ ಪ್ರಾಚಾರ್ಯ ಎ.ಎ.ಬಾಳಿಕಾಯಿ ವಿದ್ಯಾರ್ಥಿಗಳ ಜೀವನದ ಕುರಿತು ಮಾತನಾಡಿದರು. ಸುಮಂಗಲಾ ಪಾಟೀಲ ಶಾಲಾ ಸಂಸತ್ತಿನ ಚುನಾವಣಾ ಲಿತಾಂಶ ಪ್ರಕಟಿಸಿದರು.
7ನೇ ವರ್ಗದ ಮಕ್ಕಳಾದ ಕುಮಾರಿ ಸಿಂಚನಾ ಹುಗ್ಗಿ ಹಾಗೂ ಶಂಕರ ತಳಗೇರಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿಕ್ರಮ್ ಪಾಟೀಲ ವಂದಿಸಿದರು.
ರಾಷ್ಟ್ರಮಟ್ಟದ ಒಲಿಂಪಿಯಾಡ್ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರ‌್ಯಾಂಕ್ ಗಳಿಸಿದ 3ನೇ ತರಗತಿ ವಿದ್ಯಾರ್ಥಿನಿ ಸಾಹಿತ್ಯಾ ಹಿರೇಗೌಡರ ಹಾಗೂ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ರ‌್ಯಾಂಕ್ ಗಳಿಸಿದ ಇತರ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಮತ್ತು ಪದಕ ಪ್ರದಾನ ಮಾಡಲಾಯಿತು.