ಬಳ್ಳಾರಿ ; ನಗರದ ಪುರಾತನ ಕಾಲದ ಕರಿಮಾರೆಮ್ಮ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯೂ ಅಭಿವೃದ್ಧಿಪಡಿಸಬೇಕು ಎಂದು ಪಾಲಿಕೆ ಸದಸ್ಯ ವಿ.ಶ್ರೀನಿವಾಸಲು ಬುಧವಾರ ಮನವಿ ಸಲ್ಲಿಸಿದರು.
ಇಲ್ಲಿನ ಕೋಟೆ ಮಲ್ಲೇಶ್ವರ ಹಾಗೂ ದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವದಂತೆ ಈ ಹಿಂದೆ ಪ್ರತಿ ವರ್ಷ ಕೂಡ ವಿಜೃಂಭಣೆಯಿಂದ ಕರಿಮಾರೆಮ್ಮ ದೇವಿ ಜಾತ್ರೆ ನಡೆಯುತ್ತಿತ್ತು. ಈ ಜಾತ್ರೆಗೆ ಸುತ್ತಮುತ್ತಲಿನ ಆಂಧ್ರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಸುತ್ತಿದ್ದರು. ಆದರೆ, ಈಚೆಗೆ ಧಾರ್ಮಿಕ ದತ್ತಿ ಇಲಾಖೆಯಿಂದ ನಿರ್ಲಕ್ಷೃದಿಂದ ಕೆಲ ವರ್ಷಗಳಿಂದ ಜಾತ್ರೆ ಸಂಬಂಧಪಟ್ಟ ಮಾಹಿತಿ ಹೊರಹಾಕದೆ ಅವರ ಇಷ್ಟದಂತೆ ವರ್ತಿಸುತ್ತಿದ್ದಾರೆ. ಆದ್ದರಿಂದ, ಕೂಡಲೇ ಆಯುಕ್ತರು ಎಚ್ಚೇತ್ತುಕೊಂಡು ಆ.12 ರಂದು ನಡೆಯುವ ಕರಿಮಾರೆಮ್ಮ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಿ, ಬರುವ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಇಲಾಖೆಯ ಆಯುಕ್ತೆ ಎಸಿ ಎ.ಸವಿತಾ ಅವರಿಗೆ ಮನವಿ ಸಲ್ಲಿಸಿದರು.