ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ

Develop human values.
ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭವನ್ನು ಅಕ್ಷರ ದಾಸೋಹ ಅಧಿಕಾರಿ ಸುಜಾತಾ ಪೂಜಾರಿ ಉದ್ಘಾಟಿಸಿದರು. ನಾಗೇಶ ಹೆಗಡ್ಯಾಳ, ಸಂತೋಷ ಬಂಡೆ, ಅನೀಲ ಪತಂಗಿ ಇತರರಿದ್ದರು.
Published on

ಇಂಡಿ: ವಿದ್ಯಾರ್ಥಿಗಳು ಓದಿನ ಜತೆ ವ್ಯವಹಾರಿಕ ಜ್ಞಾನ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕೆಂದು ತಾಲೂಕು ಅಕ್ಷರ ದಾಸೋಹ ಅಧಿಕಾರಿ ಸುಜಾತಾ ಪೂಜಾರಿ ಹೇಳಿದರು.

ತಾಲೂಕಿನ ಹಿರೇರೂಗಿಯ ಕೆಬಿಎಸ್, ಕೆಜಿಎಸ್ ಶಾಲೆಯಲ್ಲಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದುವ ಜತೆಗೆ ಗುರುಭಕ್ತಿ, ಶ್ರದ್ಧೆ, ಆಸಕ್ತಿ, ಸ್ವಯಂ ಶಿಸ್ತಿನ ಗುಣ ಮೈಗೂಡಿಸಿಕೊಂಡು ಸಾಧನೆಯ ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.

ಸರ್ವಜ್ಞ ಕರಿಯರ್ ಅಕಾಡೆಮಿ ಸಂಸ್ಥಾಪಕ ನಾಗೇಶ ಹೆಗಡ್ಯಾಳ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಲು ಸತತ ಪರಿಶ್ರಮ ಅಗತ್ಯ ಎಂದು ತಿಳಿಸಿದರು.

ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಗುರು-ಹಿರಿಯರನ್ನು ಗೌರವಿಸುವ, ಪರಸ್ಪರ ಪ್ರೀತಿ, ಸ್ನೇಹ, ಸಹಬಾಳ್ವೆಯಿಂದ ಜೀವನ ಸಾಗಿಸುವ, ಸಕಾರಾತ್ಮಕ ಚಿಂತನೆ, ಸಮಾಜಸೇವೆ ಗುಣಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.

ಕೆ.ಬಿ.ಎಸ್.ಎಸ್.ಡಿ.ಎಂ.ಸಿ ಅಧ್ಯಕ್ಷ ಮಾಳಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೆಜಿಎಸ್ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಪರಶುರಾಮ ಹೊಸಮನಿ ವಿವಿಧ ವಿಭಾಗದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.

ಮುಖ್ಯಶಿಕ್ಷಕ ಅನೀಲ ಪತಂಗಿ, ಶಿಕ್ಷಕಿ ಶ್ರದ್ಧಾ ಬಂಕಲಗಾ ವಾರ್ಷಿಕ ವರದಿ ವಾಚಿಸಿದರು.

ಎಸ್.ಡಿ.ಎಂ.ಸಿ ಸದಸ್ಯರಾದ ಕಾಶೀನಾಥ ದಳವಾಯಿ, ಪಡೆವ್ವ ನಡುವಿನಮನಿ, ಶಾಲುಬಾಯಿ ಸೈನಸಾಕಳೆ, ಆರತಿ ಗೊರನಾಳ, ಮುಖ್ಯ ಶಿಕ್ಷಕಿ ವಿ.ವೈ. ಪತ್ತಾರ ಹಾಗೂ ಶಿಕ್ಷಕರಾದ ಎಸ್.ಎಂ. ಪಂಚಮುಖಿ, ಸಾವಿತ್ರಿ ಸಂಗಮದ, ಎ್.ಎ. ಹೊರ್ತಿ, ಎಸ್.ಡಿ. ಬಿರಾದಾರ, ಎಸ್.ಬಿ. ಕುಲಕರ್ಣಿ, ಮಲ್ಲಮ್ಮ ಗಿರಣಿವಡ್ಡರ, ಸುಮಿತ್ರಾ ನಂದಗೊಂಡ, ಶಾಂತೇಶ ಹಳಗುಣಕಿ, ಸುರೇಶ ದೊಡ್ಯಾಳಕರ, ಜೆ.ಸಿ. ಗುಣಕಿ, ಎಸ್.ಎನ್. ಡಂಗಿ, ಬಿ.ಎಸ್. ಹೊಸೂರ, ಪ್ರಜ್ವಲ ಕುಲಕರ್ಣಿ, ಎಸ್.ಆರ್. ಚಾಳೇಕರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net