

ಮುಂಡರಗಿ: ಯುವಕರು ಉತ್ತಮ, ಆರೋಗ್ಯಕರ ಹವ್ಯಾಸ ಬೆಳೆಸಿಕೊಳ್ಳುವುದರ ಮೂಲಕ ದುಶ್ಚಟಗಳಿಂದ ದೂರ ಇರಬೇಕು ಎಂದು ಗದಗ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎ.ಕೆ. ಮುಲ್ಲಾನವರ ಹೇಳಿದರು.
ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಕ್ಷೇತ್ರ ಯೋಜನಾಧಿಕಾರಿ ವಿಶಾಲಾ ಮಲ್ಲಾಪುರ ಮಾತನಾಡಿ, ಇತ್ತೀಚಿನ ಆಹಾರ ಪದ್ಧತಿ, ಕೌಟುಂಬಿಕ ಸ್ಥಿತಿ ಇತರೆ ಸಂದರ್ಭಗಳಿಂದ ಮಕ್ಕಳು ದುಶ್ಚಟಕ್ಕೆ ದಾಸರಾಗುತ್ತಾರೆ. ದುಶ್ಚಟಗಳಿಂದ ದೂರವಿರಬೇಕು ಎಂದರು.
ವಿಜ್ಞಾನ ಶಿಕ್ಷಕ ಎಂ.ಎಂ. ಲೋಹಾನಿ ಮಾತನಾಡಿದರು. ಮುಖ್ಯಶಿಕ್ಷಕಿ ಹಂಸವಾಣಿ ಕೆ.ಆರ್. ಅಧ್ಯಕ್ಷತೆ ವಹಿಸಿದ್ದರು. ಯೋಜನೆ ಒಕ್ಕೂಟದ ಅಧ್ಯಕ್ಷ ರಮೇಶ ಅಡರಕಟ್ಟಿ, ಯೋಜನೆಯ ಸಿ.ಎಸ್.ಸಿ. ಕಿರಣ ಮತ್ತು ವಲಯದ ಮೇಲ್ವಿಚಾರಕಿ ನೇತ್ರಾ, ಸೇವಾಪ್ರತಿನಿಧಿಗಳಾದ ದಾವಲ್ ಬಿ, ಯಲ್ಲಮ್ಮ ಇತರರು ಇದ್ದರು. ಶಿಕ್ಷಕಿ ಗೀತಾ ಸ್ವಾಗತಿಸಿದರು. ಶಿಕ್ಷಕಿ ಶಾಂತಾ ವಂದಿಸಿದರು.