ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಿ

Develop environmental awareness in children
Published on

ರಬಕವಿ- ಬನಹಟ್ಟಿ : ಪ್ರಾಥಮಿಕ ಹಂತದ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಿದರೆ ಮಕ್ಕಳು ಪ್ರೌಢಾವಸ್ಥೆಗೆ ಬರುವಷ್ಟರಲ್ಲಿ ಅವರಲ್ಲಿರುವ ಪರಿಸರ ಪ್ರಜ್ಞೆ ಮರವಾಗಿ ಬೆಳೆದು ದೇಶಕ್ಕೆ ಉತ್ತಮ ಕೊಡುಗೆ ಕೊಡಬಲ್ಲದು ಎಂದು ರಬಕವಿ ಹೊಸೂರ ಪದ್ಮಾವತಿ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಆಡಳಿತಾಳಿಕಾರಿ ಭಾರತಿ ತಾಳಿಕೋಟಿ ಹೇಳಿದರು.

ರಬಕವಿ ಹೊಸೂರ ಪದ್ಮಾವತಿ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಒಬ್ಬ ವಿದ್ಯಾರ್ಥಿಯೂ ಒಂದೊಂದು ಗಿಡದ ಜವಾಬ್ದಾರಿ ನೀಡಿ. ಆ ಮರವನ್ನು ವರ್ಷ ಪೂರ್ತಿ ಪಾಲನೆ ೋಷಣೆ ಮಾಡಿ ಉತ್ತಮ ರೀತಿಯಲ್ಲಿ ಬೆಳೆಸಿದವರಿಗೆ ಇಂಟರ್‌ನಲ್ ಅಂಕಗಳನ್ನು ನಿಗದಿ ಪಡಿಸಲಾಗುವುದು ಎಂದರು.

ಪ್ರಾಚಾರ್ಯ ಬಸವರಾಜ ಕಲಾದಗಿ ಮಾತನಾಡಿ, ಮಕ್ಕಳು ಓದಿನೊಂದಿಗೆ ಪರಿಸರದ ಕುರಿತು ಕಾಳಜಿ ಬೆಳೆಸಿಕೊಳ್ಳಬೇಕು ಎಂದರು. ಆರ್.ಕೆ. ನೀಶಾದ ಮತ್ತು ಶ್ರೀಜಾ ಪಿಲೈ ಪರಿಸರ ಸಂರಕ್ಷಣೆಯ ಕುರಿತು ಪ್ರಮಾಣವಚನ ಬೋಧಿಸಿದರು. ಗಂಗಾಧರ ಬಡಿಗೇರ, ಅಂಕಿತಾ ಪಾಟೀಲ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net