ಮಕ್ಕಳಿಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಿ

IMG_20220922_183138
ವಿಜಯಪುರ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ಹಾಗೂ ಲಿತಾಂಶ ಸುಧಾರಣೆ ಸಭೆಯಲ್ಲಿ ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಸನ್ಮಾನಿಸಿದರು. ಜಿಲ್ಲಾ ನೊಡಲ್ ಅಧಿಕಾರಿ ಬಿ.ಎಚ್. ಗೋನಾಳ, ಮಂಜುನಾಥ ಗುಳೇದಗುಡ್ಡ, ಎಸ್.ಡಿ.ಮೋಸಲಗಿ, ಸಾಯಿರಾಬಾನು ಖಾನ್ ಮತ್ತಿತರರಿದ್ದರು.
Published on

ವಿಜಯಪುರ : ಮಕ್ಕಳಿಗೆ ವಿವಿಧ ಬಗೆಯ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ನಡೆಸುವ ಮೂಲಕ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಲಿತಾಂಶ ಸುಧಾರಣೆ ಮಾಡಿ ಎಂದು ಜಮಖಂಡಿ ಸಿಟಿಇ ಸಹ ನಿರ್ದೇಶಕ ಹಾಗೂ ಜಿಲ್ಲಾ ನೊಡಲ್ ಅಧಿಕಾರಿ ಬಿ.ಎಚ್. ಗೋನಾಳ ಹೇಳಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಂಯುಕ್ತ ಆಶ್ರಯದಲ್ಲಿ ನಡೆದ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ಹಾಗೂ ಲಿತಾಂಶ ಸುಧಾರಣೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಲಿತಾಂಶ ಸುಧಾರಣೆಗೆ ಕ್ರಿಯಾಯೋಜನೆಯ ಅನುಷ್ಠಾನ ಮಾಡಿಕೊಳ್ಳಿ ಎಂದು ಮುಖ್ಯಶಿಕ್ಷಕರಿಗೆ ತಿಳಿಸಿದರು.

ಜಿಲ್ಲಾ ಡಯಟ್ ಉಪ ನಿರ್ದೇಶಕಿ ಸಾಯಿರಾಬಾನು ಖಾನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಘಟಕ ಪರೀಕ್ಷೆಗಳನ್ನು ನಡೆಸುವ ಮೂಲಕ ಮಕ್ಕಳ ಬುದ್ಧಿಮಟ್ಟಕ್ಕೆ ಅನುಗುಣವಾಗಿ ಗುಂಪು ಮಾಡಿ ವಿಶೇಷ ತರಗತಿ ನಡೆಸುವ ಮೂಲಕ ಈ ಬಾರಿ ಉತ್ತಮ ಲಿತಾಂಶ ಬರುವಂತೆ ಸುಧಾರಣೆ ಮಾಡಬೇಕು ಎಂದರು.
ಡಿಡಿಪಿಐ ಉಮೇಶ ಶಿರಹಟ್ಟಿಮಠ ಮಾತನಾಡಿ, ನಾನು ನೆಮ್ಮದಿಯಿಂದ ಇರಬೇಕಾದರೆ ಶಾಲೆಯಲ್ಲಿ ಕೆಲಸ ಮಾಡಬೇಕು. ಪ್ರಾಮಾಣಿಕತೆಯಿಂದ ನಾವಿನ್ಯಯುತ ಚಟುವಟಿಕೆಗಳ ಮೂಲಕ ಶಿಕ್ಷಕ ವೃತ್ತಿಯನ್ನು ಸಾರ್ಥಕ ಗೊಳಿಸಬೇಕು ಎಂದು ಹೇಳಿದರು.

ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ ಆರ್. ಕೆ. ಮಾತನಾಡಿ, ಶಾಲೆಯಲ್ಲಿ ಮುಖ್ಯ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿರಬೇಕು. ಮುಖ್ಯ ಶಿಕ್ಷಕರು ಹೇಗೆ ಇರುವರೋ ಆ ರೀತಿ ಶಾಲೆ ಇರುತ್ತದೆ ಎಂದರು.

ಇದೇ ವೇಳೆ 2021-22 ನೇ ಸಾಲಿನಲ್ಲಿ ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಪಾಸಾದ ಜಿಎಚ್‌ಎಸ್ ಕನಮುಚನಾಳ ಪ್ರೌಢಶಾಲೆಯ ವಿದ್ಯಾರ್ಥಿ ರೋಹಿತ ಬಿರಾದಾರ (ಪ್ರಥಮ), ಕಗ್ಗೊಡ ಆದರ್ಶ ವಿದ್ಯಾಲಯದ ಶಾಂಭವಿ ಇಂಡಿ (ದ್ವಿತೀಯ), ಸೃಷ್ಠಿ ಪರಂಡಿ (ತತೀಯ) ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ನೋಡಲ್ ಅಧಿಕಾರಿ ಮಂಜುನಾಥ ಗುಳೇದಗುಡ್ಡ, ಕ್ಷೇತ್ರ ಸಮಾನ್ವಯಾಧಿಕಾರಿ ಎಸ್.ಡಿ.ಮೋಸಲಗಿ, ಅರುಂಧತಿ ಡಿ., ತಾಲೂಕು ನೋಡಲ್ ಅಧಿಕಾರಿ ರವೀಂದ್ರ ಚಿಕ್ಕಮಠ್, ಪ್ರಭು ಬಿರಾದಾರ, ಜಿ.ಟಿ.ಕಾಗವಾಡ, ಸುಭಾಸ್ ರಾಠೋಡ, ರವಿ ಪವಾರ, ದೈಹಿಕ ಶಿಕ್ಷಣಾಧಿಕಾರಿ ಎಸ್. ಎಂ. ದೇಯಗೊಂಡ, ಮುಖ್ಯೋಪಾಧ್ಯಾಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net