

ಕುಷ್ಟಗಿ: ಹನುಮಸಾಗರದ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜ ವಿಶ್ವಸ್ಥ ಟ್ರಸ್ಟ್‌ನ ಪದಾಧಿಕಾರಿಗಳು ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಮುರುಳಿಧರ್‌ಗೆ ಗುರುವಾರ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಸಮುದಾಯದ 16 ಲಕ್ಷ ಜನರಿದ್ದು, ಈ ಪೈಕಿ ಶೇ.85 ರಷ್ಟು ಬಡವರಿದ್ದಾರೆ. ಕೂಲ್ಡ್ರಿಂಕ್ಸ್, ಹೊಟೇಲ್, ವಾಚ್ ರಿಪೇರಿ, ಬೀದಿ ಬದಿ ವ್ಯಾಪಾರ ಮಾಡುತ್ತ ಜೀವನ ನಡೆಸುತ್ತಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿದರೆ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಸರ್ಕಾರದ ವತಿಯಿಂದ ಸಹಸ್ರಾರ್ಜುನ ಜಯಂತಿ ಆಚರಣೆ ಮತ್ತು ಪ್ರತಿ ಜಿಲ್ಲೆಯ ಸಮುದಾಯದ ಜನ ಹೆಚ್ಚಿರುವ ಕಡೆಗಳಲ್ಲಿ ಸಹಸ್ರಾರ್ಜುನ ವೃತ್ತ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
ಸಮುದಾಯದ ಅಧ್ಯಕ್ಷ ಭಗೀರಥ, ಪದಾಧಿಕಾರಿಗಳಾದ ಮಾರುತಿ ಸಾ ರಂಗ್ರೇಜ್, ವಿಠ್ಠಲ್ ಸಾ ಸಿಂಗ್ರಿ, ಆನಂದ್ ಸಾ ಮೇಹರವಾಡೆ, ವೆಂಕಟೇಶ ರಂಗರೇಜ್, ಅಶೋಕ್ ಮಿಸ್ಕಿನ್, ಆನಂದ್ ರಾಯಬಾಗಿ ಇದ್ದರು.