ಸಂಶೋಧನೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಿ

12Huk2
Published on

ಹುಕ್ಕೇರಿ: ಇಂದಿನ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಸಕ್ತಿ ಕಡಿಮೆಯಾಗಿದ್ದು, ಪ್ರತಿಯೊಬ್ಬರು ಸಂಶೋಧನೆಯಲ್ಲಿ ಆಸಕ್ತಿ ಬೆಳಸಿಕೊಂಡರೆ ಜೀವನದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ಬಿ.ಎಸ್​.ನಾವಿ ತಿಳಿಸಿದರು.

ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವನಾಥ ಕತ್ತಿ ಪ್ರಥಮ ದರ್ಜೆ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿಎ, ಬಿ.ಕಾಂ, ಬಿ.ಎಸ್ಸಿ, ಬಿಸಿಎ ವಿದ್ಯಾರ್ಥಿಗಳಿಗೆ ಈಚೆಗೆ ಹಮ್ಮಿಕೊಂಡಿದ್ದ ಪ್ರಾಯೋಗಿಕ ವರದಿ ರಚನೆ ಹಾಗೂ ಮಂಡನೆ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು. ವಿದ್ಯುತ್​ ಸಹಕಾರಿ ಸಂದ ನಿರ್ದೇಶಕ ಪೃಥ್ವಿ ಕತ್ತಿ ಮಾತನಾಡಿ, ವಿದ್ಯಾರ್ಥಿಗಳು ಆಲೋಚನೆಗೆ ತಕ್ಕಂತೆ ಪ್ರಾಯೋಗಿಕ ವರದಿ ರಚಿಸಿ ಅದು ಸಕಾರಾತ್ಮಕವಾಗಿಯೋ ಅಥವಾ ನಕಾರಾತ್ಮಕವಾಗಿಯೋ ಇರಬಹುದು. ಮುಂಬರುವ ದಿನಗಳಲ್ಲಿ ಎರಡು ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದರು.

ವಿವಿಧ ಮಹಾವಿದ್ಯಾಲಯಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಹಪ್ರಾಧ್ಯಾಪಕರಾದ ಡಾ.ಎಂ.ಎನ್​.ಬೆನ್ನೂರ, ಡಾ.ಎನ್​.ಎಲ್​.ತೇರದಾಳ, ಆಡಳಿತಾಧಿಕಾರಿ ಕೆ.ಸಿ.ಮುಚಖಂಡಿ, ಪ್ರಾಚಾರ್ಯ ಡಾ.ವಿ.ಎಸ್​.ಹೂಗಾರ, ಡಾ.ಉಮೇಶ ಪಾಟೀಲ, ಪೃಥ್ವಿ ಕತ್ತಿ, ಕೆ.ಸಿ.ಮುಚಖಂಡಿ, ಡಾ.ವಿ.ಎಸ್​.ಹೂಗಾರ, ಡಾ.ಉಮೇಶ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net