ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ

Untitled-5
ದೇವನಹಳ್ಳಿ ತಾಲೂಕು ಚೌಡಪ್ಪನಹಳ್ಳಿ ನಳಂದ ಶಾಲೆಯಲ್ಲಿ ಸುವರ್ಣ ಕರ್ನಾಟಕ ಸಂಸ್ಥೆಯಿಂದ ಆಯೋಜಿಸಿದ್ದ ನ್ಯಾಷನಲ್​ ಥ್ರೋಬಾಲ್​ ಪಂದ್ಯಾವಳಿಯನ್ನು ಸಚಿವ ಕೆ.ಎಚ್​.ಮುನಿಯಪ್ಪ ಉದ್ಘಾಟಿಸಿದರು. ವಿಜಯಪುರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ವೆಂಕಟೇಶ್​, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಧ್ಯಕ್ಷ ಶಾಂತಕುಮಾರ್​ ಬೂದಿಗೆರೆ, ಶಂಕರಪ್ಪ ಇದ್ದರು.
Published on

ಚನ್ನರಾಯಪಟ್ಟಣ : ಶಾಲಾ ಹಂತದಲ್ಲಿ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಅವರಲ್ಲಿ ಸಾಮಾನ್ಯ ಜ್ಞಾನ ಹೆಚ್ಚುತ್ತದೆ ಎಂದು ಸಚಿವ ಕೆ.ಎಚ್​.ಮುನಿಯಪ್ಪ ಹೇಳಿದರು. ದೇವನಹಳ್ಳಿ ತಾಲೂಕು ಚೌಡಪ್ಪನಹಳ್ಳಿ ನಳಂದ ವಸತಿ ಶಾಲೆಯ ಸುವರ್ಣ ಕರ್ನಾಟಕ ಥ್ರೋಬಾಲ್​ ಅಸೋಸಿಯೇಷನ್​ನಿಂದ ಆಯೋಜಿಸಿದ್ದ 35ನೇ ಜೂನಿಯರ್​ ನ್ಯಾಷನಲ್​ ಥ್ರೋಬಾಲ್​ ಪಂದ್ಯಾವಳಿಯಲ್ಲಿ ಮಾತನಾಡಿದರು.

ಸ್ಪರ್ಧೆಯಲ್ಲಿ ಸೋಲು&ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಯುವಕರಿಗೆ ಕ್ರೀಡಾಭಿಮಾನ ಮೂಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ದೈಹಿಕ, ಮಾನಸಿಕ ನೆಮ್ಮದಿಗೆ ಕ್ರೀಡೆ ಹಾಗೂ ಯೋಗದ ಅವಶ್ಯಕತೆ ಇದೆ ಎಂದು ತಿಳಿಸಿದರು.

ನಳಂದ ಶಾಲೆ ಅಧ್ಯಕ್ಷ ಲೋಕೇಶ್​ ಮಾತನಾಡಿ, ಆಟಕ್ಕೂ ಮುನ್ನ ಕ್ರೀಡಾ ಮನೋಭಾವ ಅಗತ್ಯ. ಮನಸ್ಸಶಾಂತಿಗಾಗಿ ಕ್ರೀಡೆ ಬೇಕು. ಬಹುಮಾನ ಗೆಲ್ಲಲು ಅಲ್ಲ, ಯುವಕರು ಆರೋಗ್ಯ ಬಗ್ಗೆ ರ್ನಿಲಕ್ಷ$್ಯ ತೋರುತ್ತಿರುವುದು ವಿಷಾದನೀಯ. ದಿನದ ಒಂದಷ್ಟು ಅವಧಿಯನ್ನು ಆರೋಗ್ಯಕ್ಕಾಗಿ ಮೀಸಲಿಡಬೇಕು ಎಂದು ಸಲಹೆ ನೀಡಿದರು.

ದೇವನಹಳ್ಳಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಕೆ.ಸಿ.ಮಂಜುನಾಥ್​ ಮಾತನಾಡಿ, ವಿದ್ಯಾಭ್ಯಾಸದ ಜತೆಗೆ ಕ್ರೀಡೆಯು ಪಠ್ಯೇತರ ಚಟುವಟಿಕೆಯಿಂದ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಹೇಳಿದರು. ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ$್ಮಣ್​ ಮೂರ್ತಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ರವಿಕುಮಾರ್​, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಜಗನ್ನಾಥ್​, ವಿಜಯಪುರ ಬ್ಲಾಕ್​ ಕಾಂಗ್ರೆಸ್​ ಮಾಜಿ ಅಧ್ಯಕ್ಷ ರಾಮಚಂದ್ರಪ್ಪ, ಗಂಗವಾರ ಸನ್​ ರೈಸ್​ ಸ್ಕೂಲ್​ ಆಡಳಿತ ಮಂಡಳಿ ರಾಜಶೇಖರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net