ಬಡವರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಿ, ಶಾಸಕ ವೆಂಕಟರಮಣಯ್ಯ ಅಭಿಮತ, ಕೋಡಿಹಳ್ಳಿಯಲ್ಲಿ ನ್ಯೂಸ್ ೌಂಡೇಶನ್ ಸಂಸ್ಥೆ ಉದ್ಘಾಟನೆ

10dbp1(news foundation)
Published on

ದೊಡ್ಡಬಳ್ಳಾಪುರ: ಮಾನವ ಜೀವನ ಸಾರ್ಥಕ ಆಗಬೇಕಾದರೆ ಬಡ-ಬಗ್ಗರಿಗೆ ಸಹಾಯ ಮಾಡುವಂತಹ ಗುಣ ಬೆಳೆಸಿಕೊಳ್ಳಬೇಕು ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಕೋಡಿಹಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ನ್ಯೂಸ್ ೌಂಡೇಷನ್ ಸಂಸ್ಥೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಮಹಾಮಾರಿ ಕರೊನಾದಿಂದ ಮನುಷ್ಯನಿಗೆ ಜೀವ, ಜೀವನ, ಅತಿಯಾಸೆ ಹಾಗೂ ಶ್ರೀಮಂತಿಕೆಗಳ ಅರ್ಥವಾಗಿದೆ. ಹಲವು ಮಂದಿಗೆ ಭಗವಂತನು ಶ್ರೀಮಂತಿಕೆ ಕೊಟ್ಟಿರುತ್ತಾನೆ. ಆದರೆ ಸಮಾಜ ಸೇವೆ ಮಾಡುವಂತಹ ಮನಸ್ಸು ಕೊಟ್ಟಿರುವುದಿಲ್ಲ. ಕರೊನಾ ಬಂದ ಬಳಿಕ ಸಾಕಷ್ಟು ಮಂದಿ ಬದಲಾಗಿದ್ದಾರೆ. ಹೀಗಾಗಿ ಬಡವರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ನ್ಯೂಸ್ ಫೌಂಡೇಷನ್ ಬಡಬಗ್ಗರು, ತೀರಾ ಹಿಂದುಳಿದವರ ಬಗ್ಗೆ ಕಾಳಜಿ ಹೊಂದಿ ಲಾಕ್‌ಡೌನ್ ಸಮಯದಲ್ಲಿ ಸಾವಿರಾರು ನಿರ್ಗತಿಕರಿಗೆ ಬಟ್ಟೆ, ಬೆಡ್ ಶಿಟ್ ವ್ಯವಸ್ಥೆ ಮಾಡಿದೆ, ಮೂರು ತಿಂಗಳು ನೂರಾರು ಮಂದಿಗೆ ಊಟದ ವ್ಯವಸ್ಥೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆ ಸಾಮಾಜಿಕ ಕೆಲಸ ಮುಂದುವರಿಸಲಿ. ನಾನೂ ಕೂಡ ಸಂಸ್ಥೆ ಜೊತೆ ಕೈಜೋಡಿಸುತ್ತೇನೆ ಎಂದರು.

ನ್ಯೂಸ್ ಫೌಂಡೇಶನ್ ಅಧ್ಯಕ್ಷ ರಾಮೇಗೌಡ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನತೆ ಕರೊನಾ ಬಂದ ಬಳಿಕ ತೀವ್ರ ಸಂಕಷ್ಟದಲ್ಲಿದ್ದಾರೆ. ಒಂದೊತ್ತಿನ ಊಟ, ಮಕ್ಕಳ ವಿದ್ಯಾಭ್ಯಾಸ, ಆರ್ಥಿಕವಾಗಿಯೂ ಕೂಡ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಜನತೆ ಆರೋಗ್ಯ ಕಾಳಜಿ ವಹಿಸಬೇಕಿದೆ. ಆರೋಗ್ಯ ಜಾಗೃತಿ ಮೂಡಿಸುವ ಜೊತೆಗೆ ಶಿಬಿರಗಳನ್ನು ಮಾಡಲಾಗುವುದು ಎಂದರು.

ಬಡಬಗ್ಗರಿಗೆ ಬೆಡ್‌ಶಿಟ್, ಮಹಿಳೆಯರಿಗೆ ಸೀರೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಲಾಯಿತು.

ನ್ಯೂಸ್ ಫೌಂಡೇಷನ್ ನಿರ್ದೇಶಕರಾದ ಪರಮೇಶ್, ದಯಾನಂದ, ಮನು, ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕ ಉಪಾಧ್ಯಕ್ಷ ಎಸ್.ಯು.ರಮೇಶ್, ಕೊನಘಟ್ಟ ವಿಎಸ್ಸೆಸ್ಸೆನ್ ಉಪಾಧ್ಯಕ್ಷ ರಮೇಶ್, ಕೊನಘಟ್ಟ ಗ್ರಾಪಂ ಸದಸ್ಯರಾದ ಆರಾಧ್ಯ, ಮಂಜುನಾಥ, ಬಾಲರಾಜು, ಜ್ಯೋತಿರಮೇಶ್, ಸುಧಾ, ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net