ಧಾರ್ವಿುಕ ಮನೋಭಾವ ಬೆಳೆಸಿಕೊಳ್ಳಿ

23-gdg-1
Published on

ಗದಗ: ಆಧುನಿಕ ದಿನಗಳಲ್ಲಿ ಧರ್ಮ ಮತ್ತು ಧಾರ್ವಿುಕ ಕಾರ್ಯಗಳಲ್ಲಿ ಜನತೆಯ ಒಲವು ಕಡಿಮೆಯಾಗುತ್ತಿದೆ. ಯುವ ಜನಾಂಗ ಧಾರ್ವಿುಕ ಕ್ಷೇತ್ರದಿಂದ ವಿಮುಖರಾಗುತ್ತಿದ್ದಾರೆ ಎಂದು ಗದಗ-ಬೆಟಗೇರಿ ನಗರಸಭೆ ಮಾಜಿ ಸದಸ್ಯ ಎಂ.ಸಿ. ಶೇಖ್ ಹೇಳಿದರು.

ನಗರದ ರೇಣುಕ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ರೇಣುಕಾಚಾರ್ಯ ಜಯಂತಿ, ರಥೋತ್ಸವ, ಪ್ರವಚನ ಮಾಲಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಾವಿಂದು ಧರ್ಮ ಮಾರ್ಗದಲ್ಲಿ ಮುನ್ನಡೆಯಬೇಕಿದೆ. ಮಕ್ಕಳಿಗೆ ಧರ್ಮದ ತಿರುಳು ತಿಳಿಸಬೇಕು, ಅವರಿಗೆ ಧಾರ್ವಿುಕ ಪರಂಪರೆ, ಸಂಸ್ಕೃತಿ, ಸಂಸ್ಕಾರ ನೀಡಬೇಕು’ ಎಂದರು.

ವ್ಯಕ್ತಿಯ ಜಾತಿಗಿಂತ ಧಾರ್ವಿುಕ ಮನೋಭಾವನೆ ನೋಡಬೇಕು. ಎಲ್ಲ ಧರ್ಮಗಳು ಮಾನವೀಯತೆ, ಮಾನವ ಜನಾಂಗದ ಏಳಿಗೆಯನ್ನೇ ಬಯಸಿವೆ. ಪಂಚಪೀಠದ ಲಿಂ. ವೀರಗಂಗಾಧರ ಶಿವಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ನೀಡಿರುವುದು ಸರ್ವ ಕಾಲಕ್ಕೂ ಅನ್ವಯಿಸುವಂಥದ್ದು ಎಂದರು.

ಸಾನ್ನಿಧ್ಯ ವಹಿಸಿದ್ದ ನರೇಗಲ್ಲ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ರೇಣುಕ ಮಂದಿರದ ಚಂದ್ರಶೇಖರ ದೇವರು ನೇತೃತ್ವ ವಹಿಸಿದ್ದರು. ಪಂಚಾಚಾರ್ಯ ವೇದ ಆಗಮ ಸಂಸ್ಕೃತ ಪಾಠ ಶಾಲೆ ವಟುಗಳಿಂದ ವೇದಘೊಷ ನಡೆಯಿತು. ಶಶಿಧರ ಕಲಬುರ್ಗಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು.

ಗದಗ-ಬೆಟಗೇರಿ ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಬೇಲೇರಿ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಘಟಕದ ಅಧ್ಯಕ್ಷೆ ಸಂಗಮ್ಮ ಹಿರೇಮಠ, ಯುವ ಘಟಕದ ಕಾರ್ಯದರ್ಶಿ ವಿಜಯಕುಮಾರ ಹಿರೇಮಠ ವೇದಿಕೆಯಲ್ಲಿದ್ದರು.

ಸುರೇಶ ಅಬ್ಬಿಗೇರಿ, ಎಂ.ಎಂ. ಹಿರೇಮಠ, ಗುರುಸಿದ್ದಯ್ಯ ಹಿರೇಮಠ, ಸುನೀಲ ಅಬ್ಬಿಗೇರಿ, ರಮೇಶ ಶಿಗ್ಲಿ, ಚಂದ್ರು ಅಬ್ಬಿಗೇರಿ, ಯು.ಆರ್. ಭೂಸನೂರಮಠ, ಮಹಾಂತೇಶ ಪಾಟೀಲ, ರಾಜು ಮುಧೋಳ, ಲತಾ ಮುತ್ತಿನಪೆಂಡಿಮಠ, ಅನ್ನಪೂರ್ಣಾ ಗಡಾದ, ಮಂಗಲಾ ಬೇಲೇರಿ, ಜ್ಯೋತಿ ಚಳಗೇರಿ, ಶಶಿಕಲಾ ಲಕ್ಕನಗೌಡ್ರ, ಶಕುಂತಲಾ ಬೇಲೇರಿ ಇತರರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ವಿ.ಕೆ. ಗುರುಮಠ ನಿರೂಪಿಸಿದರು. ಸಿದ್ದಲಿಂಗಪ್ಪ ಚಳಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net