

ಕೋಲಾರ: ಮಕ್ಕಳು ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಾಗಿ ಶಿಕ್ಷಣದೊಂದಿಗೆ ಕ್ರೀಡೆಗಳಿಗೂ ಒತ್ತು ನೀಡಬೇಕು. ಆಗಲೇ ಕ್ರಿಯಾಶೀಲತೆಯಿಂದರಲು ಸಾಧ್ಯ ಎಂದು ಪ್ಯಾರಾ ಒಲಿಂಪಿಕ್ ಕ್ರೀಡಾ ಸಂಸ್ಥೆ ಜಿಲ್ಲಾಧ್ಯಕ್ಷ ಕೆ.ಜಯದೇವ್ ತಿಳಿಸಿದರು. ಘಿ
ನಗರದಲ್ಲಿನ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿ ಕೊಂಡಿದ್ದ 2 ತಿಂಗಳ ಬೇಸಿಗೆ ಕ್ರೀಡಾ ಶಿಬಿರದ
ಸಮಾರೋಪದಲ್ಲಿ ಮಾತನಾಡಿದ ಅವರು, ಕ್ರೀಡೆ ಬದುಕಿನ ಭಾಗ. ಬದಲಾದ ಆಹಾರ
ಪದ್ಧತಿಯಿಂದ ಇಂದು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಆರೋಗ್ಯ ಸಮಸ್ಯೆಗಳಿಂದ ಮುಕ್ತರಾಗಿ, ಜೀವನವನ್ನು ಉತ್ತಮವಾಗಿ ನಡೆಸಲು ಕ್ರೀಡೆ, ವ್ಯಾಯಾಮ ನಿತ್ಯ ಅಗತ್ಯ ಎಂದರು.
ಮಕ್ಕಳು ಪರೀಕ್ಷೆಯಲ್ಲಿ ಎಷ್ಟು ಅಂಕ ಪಡೆದರು ಎಂದು ಪಾಲಕರು ನೋಡುತ್ತಾರೆಯೇ ವಿನ@ ಮಗುವಿನ ಆರೋಗ್ಯದ ಕಡೆ ಗಮನಹರಿಸುವುದಿಲ್ಲ.
ಕ್ರೀಡೆಯೂ ಸಮಗ್ರಶಿಕ್ಷಣದ ಭಾಗವಾಗಿದ್ದು, ಪಠ್ಯದಷ್ಟು ಕ್ರೀಡೆಗಳಿಗೂ ಪ್ರೋತ್ಸಾಹ ನೀಡಬೇಕು ಎಂದರು.
ಅಂಗವಿಕಲರು ಕ್ರೀಡೆಯಿಂದ ಮುಖ್ಯವಾಹಿನಿಗೆ ಬರಬಹುದು ಎಂಬುದಕ್ಕೆ ಇತ್ತೀಚಿನ ಪ್ಯಾರಾ ಒಲಿಂಪಿಕ್ಸ್ನಲ್ಲಿ ಅಂಗವಿಕಲ ಕ್ರೀಡಾಪಟುಗಳು ಮಾಡಿರುವ ಸಾಧನೆಯೇ ಸಾಕ್ಷಿ.
ಹಾಗಾಗಿ ಅಂಗವಿಕಲ ಕ್ರಿಡಾಪಟುಗಳನ್ನು ತಾತ್ಸರದಿಂದ ಕಾಣದೇ ಅವರನ್ನೂ ಪ್ರೋತ್ಸಾಹಿಸಬೇಕು ಎಂದರು. ಹಿರಿಯ ಕ್ರೀಡಾಪಟುಗಳಾದ ಎಚ್.ಜಗನ್, ಆರ್.ಶ್ರೀನಿವಾಸನ್, ಗೌಸ್ಖಾನ್, ರಾಜೇಶ್, ಪುರುಷೋತ್ತಮ್, ನಂದೀಶ್ ಕುಮಾರ್, ಶಿವಪ್ಪ, ತರಬೇತುದಾರ ವೆಂಕಟೇಶ್ ಇದ್ದರು.