ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

FotoJet
Published on

ಹುಳಿಯಾರು: ಪುಸ್ತಕದ ಮುಂದೆ ತಲೆ ತಗ್ಗಿಸಿದರೆ ಪ್ರಪಂಚದ ಮುಂದೆ ತಲೆ ಎತ್ತುವಂತೆ ಮಾಡುತ್ತದೆ. ಮೊಬೈಲ್​ ಮುಂದೆ ತಲೆ ಎತ್ತಿದರೆ ತಲೆ ತಗ್ಗಿಸುವಂತೆ ಮಾಡುತ್ತದೆ ಎಂದು ಬೋರನಕಣಿವೆ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ವಿ.ಎಚ್​.ರೇವಣ್ಣ ತಿಳಿಸಿದರು.

ಹುಳಿಯಾರು ಹೋಬಳಿಯ ಬೋರನಕಣಿವೆಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಘ ಉದ್ಘಾಟನೆ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವರ್ಗಾವಣೆಗೊಂಡ ಉಪನ್ಯಾಸಕರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಪನ್ಯಾಸಕಿ ಟಿ.ಆರ್​.ವರಮಹಾಲಕ್ಷಿ$್ಮ ಮಾತನಾಡಿ, ವಿದ್ಯೆ ಸಾಧಕನ ಸೊತ್ತೆ ಹೊರತು ಸೋಮಾರಿಗಳ ಸೊತ್ತಲ್ಲ. ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಒಂದಲ್ಲ ಒಂದು ದಿನ ಪ್ರತಿಫಲ ಕೊಡುತ್ತದೆ ಎನ್ನುವುದನ್ನು ವಿದ್ಯಾರ್ಥಿಗಳು ಮನಗಂಡು ಕಲಿಕೆಯಲ್ಲಿ ತೊಡಗಬೇಕು ಎಂದರು.

ಎಚ್​.ಬಿ.ತುಂಗಾ, ಡಿ.ಎಸ್​.ಪ್ರೇಮಾ, ಕೆ.ಎಸ್​.ಗಗನ, ಎಚ್​.ಭೂಮಿಕಾ ಅವರನ್ನು ಸನ್ಮಾನಿಸಲಾಯಿತು.

ಹಿರಿಯ ವಿದ್ಯಾರ್ಥಿಗಳಾದ ಸಿ.ಕೆ.ಯೋಗೀಶ್​, ಬಿ.ಕೆ.ಯಶವಂತ ಕುಮಾರ್​, ಎ.ವಿ.ನರಸಿಂಹಮೂರ್ತಿ, ಬಿ.ಡಿ.ರಂಗಸ್ವಾಮಿ, ಎನ್​.ಅಜಯ್​ ಕುಮಾರ್​, ಕೃಷ್ಣಪ್ಪ, ಕಾಂಚನಾ, ಹಂಸಾ, ರೇಣುಕಾಪ್ರಸಾದ್​, ಮೋಹನ್​ ಕುಮಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net