ಓದುವ ಹವ್ಯಾಸ ಬೆಳೆಸಿಕೊಳ್ಳಿ

17ATHANIGRAMIN1
Published on

ಅಥಣಿ ಗ್ರಾಮೀಣ: ವಿದ್ಯಾರ್ಥಿಗಳು ಶೈಕ್ಷಣಿಕ ಜ್ಞಾನ ಪಡೆದು ಕೌಶಲ ಹೆಚ್ಚಿಸಿಕೊಳ್ಳಬೇಕು ಎಂದು ಅಥಣಿ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ವಿಲಾಸ ಕಾಂಬಳೆ ಕರೆ ನೀಡಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಕೆ ಉದ್ಘಾಟನೆ ಹಾಗೂ ಬಿಎ, ಬಿ.ಕಾಂ, ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕನ್ನಡ ವಿಭಾಗ ಮತ್ತು ಸಂಚಾಲಕರು ಸಾಂಸ್ಕೃತಿಕ ಘಟಕದ ಪ್ರೊ.ದಯಾನಂದ ಎನ್.ಎಲ್. ಮಾತನಾಡಿದರು. ಪ್ರಾಚಾರ್ಯ ಡಾ.ಪ್ರಭಾಕರ ಖ್ಯಾಡಿ, ಸಿಡಿಸಿ ಸದಸ್ಯರಾದ ಮಹಾದೇವ ಕುಂಬಾರ, ಸದಾಶಿವ ಮುದಕಣ್ಣವರ, ಎಸ್.ಎಸ್.ಹೂಟಿ, ಚಂದ್ರಕಾಂತ ಶರಣ, ಪ್ರೊ.ವಿನೋದ ಮೇತ್ರಿ, ಅಬ್ದುಲ್‌ಗನಿ ಮುಲ್ಲಾ, ಡಾ.ವಿದ್ಯಾಶ್ರೀ ಕೋಲಕಾರ, ಪಲ್ಲವಿ ಎಂ.ಎಂ., ಶೈಲಶ್ರೀ ತುಬಚಿ, ಅಂಜನಾ ಪುಕಾಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net