

ವಿಜಯಪುರ: ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದ್ದು, ಅದು ಅವರನ್ನು ಸಾಧನೆ ಮತ್ತು ಯಶಸ್ಸಿನತ್ತ ಪ್ರೇರೇಪಿಸುತ್ತದೆ ಎಂದು ಮಹಿಳಾ ವಿವಿಯ ಅರ್ಥಶಾಸ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಆರ್.ವಿ. ಗಂಗಶೆಟ್ಟಿ ಹೇಳಿದರು.
ನಗರ ಹೊರ ವಲಯದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡ 2ನೇ ಅಥ್ಲೆಟಿಕ್ ಪ್ರೋಜೆಕ್ಟ್ ಮೀಟ್&2024 ನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿರಂತರ ಅಧ್ಯಯನ, ಅಭ್ಯಾಸ ಮತ್ತು ತರಬೇತಿ ಯಾವುದೇ ೇತ್ರದಲ್ಲಿ ಉತ್ತಮ ಸಾಧನೆ ಮಾಡಲು ನೆರವಾಗುತ್ತವೆ. ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸ್ಪಷ್ಟತೆ ಅವರನ್ನು ಮುನ್ನಡೆಸಲು ಅಡಿಪಾಯವಾಗುತ್ತದೆ ಎಂದರು.
ಸಮಾಜಶಾಸ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಪಿ. ಬಳಿಗಾರ ಮಾತನಾಡಿ, ವಿದ್ಯಾರ್ಥಿನಿಯರು ದೇಶದ ಆಸ್ತಿ. ಎಲ್ಲರೂ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.
ಪೊ. ರಾಜಕುಮಾರ ಪಿ. ಮಾಲಿಪಾಟೀಲ ಮಾತನಾಡಿದರು. ವಿಭಾಗದ ಮುಖ್ಯಸ್ಥ ಪ್ರೊ. ಸಕ್ಪಾಲ್ ಹೂವಣ್ಣ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಸೌಮ್ಯ ಸ್ವಾಗತಿಸಿದರು. ಸ್ನೇಹಾ ಪರಿಚಯಿಸಿದರು. ಸೌಜನ್ಯ ನಿರೂಪಿಸಿದರು. ಜಯಶ್ರೀ ವಂದಿಸಿದರು.
ನಿರ್ದೇಶಕ ಪ್ರೊ. ಶ್ರೀನಿವಾಸ, ಪ್ರೊ. ಹನುಮಂತಯ್ಯ ಪೂಜಾರಿ, ಪ್ರಾಧ್ಯಾಪಕ ಪ್ರೊ. ಜ್ಯೋತಿ ಉಪಾದ್ಯೆ, ಡಾ. ಅಶ್ವಿನಿ.ಕೆ.ಎನ್., ಡಾ. ಕಸ್ತೂರಿ, ಡಾ. ಜ್ಯೋತಿ ಅವಟಿ, ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯರು ಮತ್ತಿತರರಿದ್ದರು.