ರಾಷ್ಟ್ರಪತಿ ರೇಸ್‌ನಲ್ಲಿ ದೇವೇಗೌಡರ ಹೆಸರಿಲ್ಲ; ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ

HD Devegowda
Published on

ಬೆಂಗಳೂರು: ರಾಷ್ಟ್ರಪತಿ ಚುನಾವಣೆಯ ರೇಸ್‌ನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಹೆಸರಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿ ಚುನಾವಣೆ ಗೆ ಗೌಡರಿಗೆ ಆಸಕ್ತಿ ಇಲ್ಲ ಎಂದು ಹೇಳುವ ಮೂಲಕ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಇದ್ದ ಊಹಾಪೋಹಗಳಿಗೆ ಕುಮಾರಸ್ವಾಮಿ ತೆರೆ ಎಳೆದಿದ್ದಾರೆ.

ರಾಷ್ಟ್ರಪತಿ ಚುನಾವಣೆ ವಿಚಾರವಾಗಿ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಅವರು ಸಭೆಗೆ ಬರಲೇ ಬೇಕು ಎಂದು ಆಹ್ವಾನ ನೀಡಿದ್ದರು. 17 ಪಕ್ಷಗಳ ನಾಯಕರು ಭಾಗಿಯಾಗಿದ್ದರು, ನಾವು ಕೂಡ ಭಾಗಿಯಾಗಿದ್ದೆವು. ಜೂ.20 ರಂದು ಮತ್ತೆ ಸಭೆ ಕರೆಯಲಿದ್ದಾರೆ ಎಂದರು.

ಈಗಲ್ ಟನ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, 28 ಎಕರೆ ಸರ್ಕಾರದ ಸುಪರ್ದಿಗೆ ತೆಗೆದುಕೊಂಡ ಮೇಲೆ ಈವರೆಗೂ ಕಾನೂನು ಬದ್ಧವಾಗಿ ನಡೆದುಕೊಂಡಿಲ್ಲ. ಈ ಕುರಿತು ಚರ್ಚೆಗೆ ಸಿದ್ದನಿದ್ದೇನೆ. ಈಗಾಗಲೇ ಆ ಬಗ್ಗೆ ವಿಧಾನ ಸಭೆಯಲ್ಲಿ ಮಾತಾಡಿದ್ದೇನೆ. 28 ಎಕರೆ ಸರ್ಕಾರದ ಸುಪರ್ದಿಗೆ ತೆಗೆದುಕೊಂಡ ಮೇಲೆ. ಕಾನೂನು ಬದ್ದವಾಗಿ ಜಮೀನು ನೀಡಿಲ್ಲ. ವ್ಯಾಪಾರ ಮಾಡಿಕೊಂಡು ಕುತಿದ್ದೀರಾ? ಕೋರ್ಟ್ ಮುಂದೆ ಏನು ಹೇಳಿದ್ದೀರಿ? ನೈಸ್ ಕಂಪನಿಗೆ ಸ್ವೇಚ್ಛಾಚಾರವಾಗಿ ಭೂಮಿ ನೀಡಿದ ಕಾಂಗ್ರೆಸ್-ಬಿಜೆಪಿ ಸರ್ಕಾರಗಳು ಈ ಸಂಸ್ಥೆಗೆ ಏನು ಮಾಡಿವೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net