

ಕಲಬುರಗಿ : ಕಾವೇರಿ ನದಿ ನೀರಿಗಾಗಿ ಬೆಂಗಳೂರಿನಲ್ಲಿ ಹೋರಾಟ ಮಾಡುತ್ತಿರುವರನ್ನು ಸರ್ಕಾರವು ಪೊಲೀಸರನ್ನು ಬಳಸಿಕೊಂಡು ಬಂಧಿಸುತ್ತಿರುವುದಕ್ಕೆ ಮಾಜಿ ಸಚಿವರಾದ ಜೆಡಿಎಸ್ ಕೋರ ಕಮೀಟಿ ಅದ್ಯಕ್ಷರಾದ ಜಿ.ಟಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿಯಲ್ಲಿ ಇಂದು ನಡೆಯುತ್ತಿರುವ ಜೆ ಡಿ ಎಸ್ ಪುನಶ್ಚೇತನ ಪರ್ವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅವರು ಪತ್ರಕರ್ತರ ಜತೆಗೆ ಮಾತನಾಡಿ, ಕಾವೇರಿ ಹೋರಾಟಗಾರರನ್ನ ಪೊಲೀಸರ ಹಾಗೂ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವುದು ಕೊಡಲೇ ನಿಲ್ಲಿಸಲು ಆಗ್ರಹಿಸಿದರು.
ಪ್ರತಿಭಟನೆ ಹತ್ತಿಕ್ಕಲ್ಲು ಆಗುವುದಿಲ್ಲ , ಸರ್ಕಾರ 144 ಕಲಂ ಹಾಕಿದರೆ ಜನರು ಬಗ್ಗಲ್ಕ ಎಂದರು.
ಇವತ್ತು ನೀವು ಒಂದು ಲಕ್ಷ ಜನರನ್ನು ಓಡಿಸಿದರೆ ನಾಳೆ ಒಂದು ಕೋಟಿ ಜನ ಬರ್ತಾರೆ ಎಂದು ಗುಡುಗಿದರು..
ಕನ್ನಡಿಗರ ದ್ವನಿಯನ್ನ ಹತ್ತಿಕ್ಕುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು. ಕುಡಿಯುವ ನೀರು ಕಾವೇರಿಗಾಗಿ ಹೋರಾಟ ಮಾಡಿದರೆ ಜೈಲಿಗೆ ಕಳುಹಿಸಿದರೆ ಜನ ಸಂಪೂರ್ಣವಾಗಿ ನಿಮ್ಮನ್ನು ಮನೆಗೆ ಕಳುಹಿಸೋದು ಗ್ಯಾರಂಟಿ ಎಂದರು.