

ದೇವದುರ್ಗ: ನಾಯಿ, ನರಿ, ತೋಳ, ಬೆಕ್ಕು, ಕೋತಿ, ಹಂದಿ, ಕುರಿ ಸೇರಿ ಇತರ ಪ್ರಾಣಿಗಳು ಕಚ್ಚಿದಾಗ ಅವುಗಳ ಜೊಲ್ಲಿನ ಮೂಲಕ ರೇಬಿಸ್ ವೈರಾಣು ಹರಡುತ್ತದೆ. ಹೀಗಾಗಿ ರೋಗದ ಬಗ್ಗೆ ನಿರ್ಲಕ್ಷಿಸದೆ ಲಸಿಕೆ ಪಡೆಯಬೇಕು ಎಂದು ಟಿಎಚ್‌ಒ ಡಾ.ಬನದೇಶ್ವರ ಹೇಳಿದರು.
ಪಟ್ಟಣದ ತಾಲೂಕು ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ವಿಶ್ವ ರೇಬಿಸ್ ದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೇಬಿಸ್ ಸೋಂಕು ತಡೆಯಲು ಸಾಬೂನಿನಿಂದ ಗಾಯದ ಜಾಗ ತೊಳೆಯಬೇಕು. ಗಾಯಕ್ಕೆ ಮಣ್ಣು, ಅರಿಶಿಣ, ಎಣ್ಣೆಯಂಥ ಪದಾರ್ಥಗಳನ್ನು ಹಚ್ಚಬಾರದು. ಸರ್ಕಾರಿ ಆಸ್ಪತ್ರೆಯಲ್ಲಿ ರೇಬಿಸ್ ಚುಚ್ಚುಮದ್ದು ಹಾಕಿಸಿಕೊಳ್ಳಬೇಕು ಎಂದರು.