ಪಾಕ್ ಪ್ರಚೋದಿತ ಉಗ್ರರಿಗೆ ಕಲಿಸಲಿ ತಕ್ಕಪಾಠ

Devdurga Hindu organization protest
ದೇವದುರ್ಗದ ತಾಲೂಕು ಆಡಳಿತಸೌಧ ಮುಂದೆ ಹಿಂದುಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ನಂತರ ಪಹಲ್ಗಾಮ್‌ನಲ್ಲಿ ಹತ್ಯೆಗೀಡಾದ ಪ್ರವಾಸಿಗರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮುಖಂಡರಾದ ಪ್ರಕಾಶ ಖೇಣೇದ್, ನಾಗರಾಜ್, ಸಚಿನ್ ದೋಟಿಹಾಳ್, ಮಹಾದೇವಪ್ಪ ರೇವಣಿ, ಶರಣಪ್ಪ ಪಡಿಶೆಟ್ಟಿ, ವೆಂಕಟರಾಯ ಬೆನಕನ್, ವಿರೂಪಾಕ್ಸಿ, ಬಸವರಾಜ್ ಸೊನ್ನದ್, ವಿಜಯಲಕ್ಷ್ಮೀ, ಬಸ್ಸಮ್ಮ ಇತರರಿದ್ದರು.
Published on

ದೇವದುರ್ಗ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಖಂಡಿಸಿ ಪಟ್ಟಣದ ತಾಲೂಕು ಆಡಳಿತಸೌಧ ಮುಂದೆ ಹಿಂದುಪರ ಸಂಘಟನೆಗಳ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ವಿವಿ ಸಿಂಡಿಕೇಟ್ ಮಾಜಿ ಸದಸ್ಯ ನಾಗರಾಜ ಅಕ್ಕರಕಿ ಮಾತನಾಡಿ, ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಖಂಡನೀಯ. ಪಾಕಿಸ್ತಾನ ಪ್ರೇರಿತ ಉಗ್ರರು ಭಾರತ ಮಾತ್ರವಲ್ಲ ಜಗತ್ತಿನ ಶಾಂತಿಗೆ ಆತಂಕವೊಡ್ಡಿದ್ದಾರೆ. ನೇರವಾಗಿ ಎದುರಿಸುವ ಬದಲು ರಣಹೇಡಿಗಳಂತೆ ಸಾಮಾನ್ಯ ಜನರ ಮೇಲೆ ದಾಳಿ ಮಾಡುತ್ತಿದೆ. ಪಾಕಿಸ್ತಾನ ಉಗ್ರರನ್ನು ಪೋಷಿಸಿ ಬೆಳೆಸುತ್ತಿದ್ದು ದೇಶದ ನೆಮ್ಮದಿ ಕಸಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ದೇಶದಲ್ಲಿರುವ ಭಯೋತ್ಪಾದಕರನ್ನು ಮಟ್ಟ ಹಾಕಬೇಕು. ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಬೇಕು. ದೇಶದ ಒಳಗೆ ಉಗ್ರರ ಪರ ಅನುಕಂಪ ತೋರಿಸುವ, ಪ್ರೇರೇಪಿಸಿ ಪ್ರೋತ್ಸಾಹಿಸುವ ಶಕ್ತಿಗಳನ್ನು ಹೊಸಕಿಹಾಕಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಪ್ರಕಾಶ ಖೇಣೇದ್, ನಾಗರಾಜ್, ಸಚಿನ್ ದೋಟಿಹಾಳ್, ಮಹಾದೇವಪ್ಪ ರೇವಣಿ, ಶರಣಪ್ಪ ಪಡಿಶೆಟ್ಟಿ, ವೆಂಕಟರಾಯ ಬೆನಕನ್, ಮೌನೇಶ್ ಪತ್ತಾರ್, ಮಲ್ಲಿಕಾರ್ಜುನ ಅಮರಾಪುರ, ಸುರೇಶ ಅಮರಾಪುರ, ಬೂದೆಯ್ಯ ಸ್ವಾಮಿ, ವಿರೂಪಾಕ್ಸಿ, ಬಸವರಾಜ್ ಸೊನ್ನದ್, ವಿಜಯಲಕ್ಷ್ಮೀ, ಬಸ್ಸಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net