ಕೂಸಿನ ಮನೆಯಲ್ಲಿ ಮೂರು ತಿಂಗಳ ಆರೈಕೆ

Devadurga Kusina mane
ದೇವದುರ್ಗದ ತಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ಕೂಸಿನ ಮನೆಯ 2ನೇ ಹಂತದ ತರಬೇತಿ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ತಾಪಂ ಎಡಿ ಅಣ್ಣರಾವ್, ಹಿರಿಯ ಮೇಲ್ವಿಚಾರಕಿ ಲಕ್ಷ್ಮೀ ರಾಠೋಡ್, ಎಸ್‌ಐಆರ್‌ಡಿ ಸಂಯೋಜಕ ಶಿವಪ್ಪ, ಪ್ರಮುಖರಾದ ಚಿದಾನಂದ, ತಾಯಪ್ಪ, ಶಿವಮ್ಮ, ನಾಗರತ್ನಾ, ನಾಗಮ್ಮ ಇತರರಿದ್ದರು.
Published on

ದೇವದುರ್ಗ: ಗ್ರಾಮೀಣ ಭಾಗದಲ್ಲಿ ಬಾಣಂತಿ-ಮಗುವಿನ ಆರೈಕೆಗಾಗಿ ಗ್ರಾಪಂಗೆ ಒಂದರಂತೆ ಕೂಸಿನ ಮನೆ ಪ್ರಾರಂಭಿಸಲಾಗಿದೆ. ಇಲ್ಲಿ ತಾಯಿ-ಮಗುವಿಗೆ ಮೂರು ತಿಂಗಳ ಆರೈಕೆ ಮಾಡಲಾಗುವುದು ಎಂದು ತಾಪಂ ಎಡಿ ಅಣ್ಣರಾವ್ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಕೂಸಿನ ಮನೆ 2ನೇ ಹಂತದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಮಾತನಾಡಿದರು.

ತಾಲೂಕಿನಲ್ಲಿ ಎಲ್ಲ ಗ್ರಾಪಂನಲ್ಲಿ ಕೂಸಿನ ಮನೆಗಳನ್ನು ಪ್ರಾರಂಭಿಸಲಾಗಿದೆ. ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. 3ವರ್ಷದ ಮಗು ಕೂಸಿನಮನೆಯಿಂದ ಹೊರಗುಳಿ ಯದಂತೆ ನೋಡಿಕೊಳ್ಳಬೇಕು. ಹಳ್ಳಿ ಜನರ ಗುಳೆ ತಪ್ಪಿಸಿ ಸ್ವಂತ ಊರಿನಲ್ಲೇ ಕೆಲಸ ನೀಡಲು ನರೇಗಾ ಯೋಜನೆ ಜಾರಿಗೊಳಿಸಲಾಗಿದೆ. ಗ್ರಾಮಸ್ಥರು ಉದ್ಯೋಗ ಚೀಟಿ ಪಡೆಯಬೇಕು. ಖಾತ್ರಿ ಯೋಜನೆಯಿಂದ ಯಾವುದೇ ಕುಟುಂಬ ವಂಚಿತರಾಗದೆ ಆರ್ಥಿಕತೆಯಿಂದ ಸದೃಢವಾಗಬೇಕು. ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಿಗೂ ಆದ್ಯತೆ ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net