ಶಾಸಕರ ನಾಮಫಲಕ ತೆರವು ಮಾಡಿ

Devadurga toalgate protes
ದೇವದುರ್ಗದ ಡಾ.ಅಂಬೇಡ್ಕರ್ ವೃತ್ತದಲ್ಲಿ ನಾಗರಿಕ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು. ಮುಖಂಡರಾದ ವೆಂಕನಗೌಡ ವಕೀಲ, ಹನುಮಂತ ಕಾಕರಗಲ್, ಹನುಮಂತಪ್ಪ ಮನ್ನಾಪುರ, ವಿಶ್ವನಾಥ ಬಲ್ಲಿದವ್, ಮೋಹನ್ ಬಲ್ಲಿದವ್, ಶಾಂತಕುಮಾರ ಹೊನ್ನಟಗಿ, ಯಲ್ಲಪ್ಪ ಆಲ್ದರ್ತಿ, ಆದರ್ಶ ನಾಯಕ, ಮಾನಪ್ಪ ಮೇಸ್ತ್ರಿ ಇತರರಿದ್ದರು.
Published on

ದೇವದುರ್ಗ: ಪಟ್ಟಣದ ಪ್ರವಾಸಿ ಮಂದಿರಕ್ಕೆ ಹಾಕಲಾದ ಶಾಸಕರ ಕಚೇರಿ ನಾಮಫಲಕ ತೆರವು ಮಾಡುವುದು, ಎರಡು ಟೋಲ್‌ಗೇಟ್ ರದ್ದತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ದೇವದುರ್ಗ ನಾಗರಿಕ ಹೋರಾಟ ಸಮಿತಿ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.

ತಾಲೂಕಿನಲ್ಲಿ ಅವೈಜ್ಞಾನಿಕವಾಗಿ ಎರಡು ಟೋಲ್‌ಗೇಟ್ ನಿರ್ಮಾಣ ಮಾಡಿ ಜನರಿಗೆ ಬರೆ ಎಳೆಯಲಾಗಿದೆ. ಪ್ರವಾಸಿ ಮಂದಿರವನ್ನು ಶಾಸಕಿ ಕರೆಮ್ಮ ಜಿ.ನಾಯಕ, ಶಾಸಕರ ಕಾರ್ಯಾಲಯ ನಾಮಫಲಕ ಹಾಕಿ ಸಂಘ ಸಂಸ್ಥೆಗಳ ಸಭೆಗೆ ಸಮಸ್ಯೆ ತಂದೊಡ್ಡಿದ್ದಾರೆ. ಅಂಬೇಡ್ಕರ್ ವೃತ್ತ ನವೀಕರಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಮದ್ಯ, ಮಟ್ಕಾ, ಇಸ್ಪೀಟ್ ಜೂಜಾಟದಿಂದ ತಾಲೂಕು ಅಕ್ರಮ ಚಟುವಟಿಕೆಗಳ ತಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಡಾ.ಅಂಬೇಡ್ಕರ್ ಮೂರ್ತಿ ನವೀಕರಣ ಕಾಮಗಾರಿ ಪೂರ್ಣಗೊಳಿಸಬೇಕು. ಜಾಲಹಳ್ಳಿ, ಕಾಕರಗಲ್ ಟೋಲ್‌ಗೇಟ್ ರದ್ದುಮಾಡಬೇಕು. ಶಾಸಕ ಕಾರ್ಯಾಲಯದ ನಾಮಫಲಕ ತೆರವು ಮಾಡಬೇಕು. ಮದ್ಯ ಅಕ್ರಮ ಮಾರಾಟ ತಡೆಯಬೇಕು. ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸಿ ಹದ್ದುಬಸ್ತು ಮಾಡಬೇಕು. ಹಳೇ ಬಸ್ ನಿಲ್ದಾಣದಲ್ಲಿ ನಡೆಯುವ ಸಂತೆ ಬೇರೆಕಡೆ ಸ್ಥಳಾಂತರಿಸಬೇಕು. ಕೆಕೆಆರ್‌ಡಿಬಿ ಯೋಜನೆಯಡಿ ನಡೆಯುವ ಕಾಮಗಾರಿ ಕಳಪೆಯಿಂದ ಕೂಡಿದ್ದು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೊತ್ತದೊಡ್ಡಿ ಗ್ರಾಪಂಯನ್ನು ದೇವದುರ್ಗ ತಾಲೂಕಿನಲ್ಲೇ ಉಳಿಸಬೇಕು. ಪಟ್ಟಣದಲ್ಲಿ ಪತ್ರಿಕಾಭವನ, ಕನ್ನಡ ಭವನ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ವೆಂಕನಗೌಡ ವಕೀಲ, ಹನುಮಂತ ಕಾಕರಗಲ್, ಹನುಮಂತಪ್ಪ ಮನ್ನಾಪುರ, ವಿಶ್ವನಾಥ ಬಲ್ಲಿದವ್, ಮೋಹನ್ ಬಲ್ಲಿದವ್, ಶಾಂತಕುಮಾರ ಹೊನ್ನಟಗಿ, ಯಲ್ಲಪ್ಪ ಆಲ್ದರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net