ಮಕ್ಕಳ ಲಾಲನೆ-ಪಾಲನೆ ಪವಿತ್ರ ಸೇವೆ

Untitled design (9)
ದೇವದುರ್ಗ ತಾಲೂಕು ಮಸರಕಲ್‌ನಲ್ಲಿ ಆಯೋಜಿಸಿದ್ದ ಪೋಷಕತ್ವ ಅಭಿಯಾನ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
Published on

ದೇವದುರ್ಗ: ಪಾಲಕರಿಂದ ಲಾಲನೆ-ಪಾಲನೆಯಿಂದ ವಂಚಿತಗೊಂಡ ಮಕ್ಕಳಿಗೆ ಪೋಷಕತ್ವ ಅಭಿಯಾನದ ಮೂಲಕ ಸೂಕ್ತ ಸೇವೆ ಒದಗಿಸಲಾಗುವುದು. ಮಕ್ಕಳ ಲಾಲನೆ-ಪಾಲನೆ ಮಾಡುವುದು ಪವಿತ್ರ ಸೇವೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಸಂಯೋಜಕ ನಾಗರಾಜ ಮಾನಸಗಲ್ ಹೇಳಿದರು.

ತಾಲೂಕಿನ ಮಸರಕಲ್ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ಪೋಷಕತ್ವ ಅಭಿಯಾನ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಬಾಲ ನ್ಯಾಯ ಕಾಯ್ದೆ 2015 ಕಲಂ 44 ಮಕ್ಕಳ ರಕ್ಷಣೆಗೆ ಅವಕಾಶ ನೀಡಿದೆ. ಇದರಡಿ ಪೋಷಕತ್ವ ಯೋಜನೆಯಲ್ಲಿ ಮಗುವಿನ ಲಾಲನೆ-ಪಾಲನೆ ರಕ್ಷಣೆಗಾಗಿ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕೆಲಸ ಮಾಡುತ್ತಿವೆ. ಜೈವಿಕ ಕುಟುಂಬವಲ್ಲದ ಬೇರೊಂದು ಕುಟುಂಬಕ್ಕೆ ತಾತ್ಕಾಲಿಕ ಅಥವಾ 2 ವರ್ಷಕ್ಕೆ ಮೀರದ ಅವಧಿಯವರೆಗೆ ಮಗುವನ್ನು ಪಾಲನೆ ಮಾಡುವ ಉದ್ದೇಶದಿಂದ ಪೋಷಕತ್ವ ಅಭಿಯಾನ ಆರಂಭಿಸಲಾಗಿದೆ ಎಂದರು. ಅಂಗನವಾಡಿ ಮೇಲ್ವಿಚಾರಕಿ ಕಮಲಾಕ್ಷಿ, ವಿಜಯಲಕ್ಷ್ಮೀ, ಸಿದ್ದಲಿಂಗಪ್ಪ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net