ಮಾದಕವಸ್ತು ಸೇವನೆ ಜೀವನಕ್ಕೆ ಮಾರಕ

Untitled design
ದೇವದುರ್ಗ ತಾಲೂಕು ಮದರಕಲ್ ಗ್ರಾಮದಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಉಪನ್ಯಾಸಕ ಮಲ್ಲಿಕಾರ್ಜುನ ಕ್ಯಾದಿಗೇರಾ ಮಾತನಾಡಿದದರು. ವಿರೂಪಾಕ್ಷಯ್ಯ ಸ್ವಾಮಿ ಹಿರೇಮಠ, ಪ್ರಾಚಾರ್ಯ ಚನ್ನಬಸವ ಚಿಕ್ಕಮಠ, ಎನ್‌ಎಸ್‌ಎಸ್ ಘಟಕ ಅಧಿಕಾರಿ ರಾಮನಗೌಡ, ಶಿವರಾಜ್ ಅಬಕಾರಿ, ನಾಗರಾಜ್ ಇದ್ದರು.
Published on

ದೇವದುರ್ಗ: ಫ್ಯಾಶನ್ ಹೆಸರಿನಲ್ಲಿ ಯುವಕರು ಮಾದಕ ವಸ್ತುಗಳ ದಾಸರಾಗುತ್ತಿರುವುದು ವಿಷಾದನೀಯ. ಮಾದಕವಸ್ತು ಸೇವನೆ ಜೀವನಕ್ಕೆ ಮಾರಕವಾಗಲಿದೆ ಎಂದು ಸಮಾಜಶಾಸ್ತ್ರ ಉಪನ್ಯಾಸಕ ಮಲ್ಲಿಕಾರ್ಜುನ ಕ್ಯಾದಿಗೇರಾ ಹೇಳಿದರು.

ತಾಲೂಕಿನ ಮದರಕಲ್ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಹಾಗೂ ನವಯುಗ ಪದವಿ ಕಾಲೇಜಿನಿಂದ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂ ಸೇವಾ ವಿಶೇಷ ವಾರ್ಷಿಕ ಶಿಬಿರದಲ್ಲಿ ಬುಧವಾರ ವಿಶೇಷ ಉಪನ್ಯಾಸ ನೀಡಿದರು. ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಜತೆಗೆ ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಯುವಜನತೆ ಮಾದಕವಸ್ತುಗಳಿಂದ ದೂರವಿರಬೇಕು. ಸಾಮಾಜಿಕ ಜಾಲತಾಣ, ಮೊಬೈಲ್, ಟಿವಿ ಗೀಳಿನಿಂದ ಹೊರಬರಬೇಕು. ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.

ವಿರೂಪಾಕ್ಷಯ್ಯ ಸ್ವಾಮಿ ಹಿರೇಮಠ ಸಾನ್ನಿಧ್ಯವಹಿಸಿದ್ದರು. ಪ್ರಾಚಾರ್ಯ ಚನ್ನಬಸವ ಚಿಕ್ಕಮಠ, ಎನ್‌ಎಸ್‌ಎಸ್ ಘಟಕ ಅಧಿಕಾರಿ ರಾಮನಗೌಡ, ಶಿವರಾಜ್ ಅಬಕಾರಿ, ನಾಗರಾಜ್, ನಬಿಸಾಬ್, ಬಸವಲಿಂಗಪ್ಪ, ಸುಜಾತಾ, ಜಯಲಕ್ಷ್ಮೀ, ಚಂದ್ರಕಾಂತ್ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net