ಶಿಕ್ಷಣಕ್ಕೆ ಶೇ.10 ಅನುದಾನ ಮೀಸಲಿಡಲಿ

DVD-2
ದೇವದುರ್ಗ ತಾಲೂಕು ಜಾಲಹಳ್ಳಿಯಲ್ಲಿ ಎಸ್‌ಎಫ್‌ಐ ರಾಜ್ಯಮಟ್ಟದ ಶೈಕ್ಷಣಿಕ ಜಾಥಾ ಜರುಗಿತು. ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷರಾದ ಡಾ.ದೊಡ್ಡಬಸವರಾಜ, ಗ್ಯಾನೇಶ ಕಡಗದ್, ಜಂಟಿ ಕಾರ್ಯದರ್ಶಿ ಗಣೇಶ ರಾಠೋಡ್, ಸಿಐಟಿಯು ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ, ಗಣೇಶ ರಾಠೋಡ್, ರಮೇಶ್ ವೀರಾಪುರ, ದಿಲ್‌ಶಾದ್, ಮೌನೇಶ ದಾಸರ್, ರಿಯಾಜ್ ಇದ್ದರು.
Published on

ದೇವದುರ್ಗ: ಶಿಕ್ಷಣ ಇಲಾಖೆ ಸುಧಾರಣೆ ಹಾಗೂ ಗುಣಮಟ್ಟದ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ತನ್ನ ಬಜೆಟ್‌ನ ಶೇ.10 ಅನುದಾನವನ್ನು ಶಿಕ್ಷಣಕ್ಕೆ ಮೀಸಲಿರಿಸಬೇಕು ಎಂದು ಸಿಐಟಿಯು ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ ಹೇಳಿದರು.

ಜಾಲಹಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ ಎಸ್‌ಎಫ್‌ಐ ರಾಜ್ಯ ಮಟ್ಟದ ಶೈಕ್ಷಣಿಕ ಜಾಥಾ ಸ್ವಾಗತ ಸಮಾರಂಭದಲ್ಲಿ ಗುರುವಾರ ಮಾತನಾಡಿದರು. ಸರ್ಕಾರದ ನಿರ್ಲಕ್ಷ್ಯದಿಂದ ಶಿಕ್ಷಣ ವ್ಯವಸ್ಥೆ ಹದಗೆಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿದೆ.

ದಾಖಲಾತಿ ಕುಸಿದು ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಸರ್ಕಾರ ನಿರ್ಲಕ್ಷೃ ಮಾಡದೆ ವಿಶೇಷ ಅನುದಾನ ಕಾಯ್ದಿರಿಸಿ ಶಿಕ್ಷಕರ ನೇಮಕ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ವಕೀಲ ಬಸನಗೌಡ ದೇಸಾಯಿ ಮಾತನಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಸೌಲಭ್ಯಗಳಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣದ ಗುಣಮಟ್ಟ ಸಂಪೂರ್ಣ ತಳಕಂಡಿದೆ. ಕೂಡಲೇ ಸರ್ಕಾರ ಕಕ ಭಾಗದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷರಾದ ಡಾ.ದೊಡ್ಡ ಬಸವರಾಜ, ಗ್ಯಾನೇಶ ಕಡಗದ್, ಜಂಟಿ ಕಾರ್ಯದರ್ಶಿ ಗಣೇಶ ರಾಠೋಡ್, ಪ್ರಮುಖರಾದ ರಮೇಶ್ ವೀರಾಪುರ, ದಿಲ್‌ಶಾದ್, ಮೌನೇಶ ದಾಸರ್, ರಿಯಾಜ್, ಹನುಮಂತ ಗುರಿಕಾರ, ದುರುಗಪ್ಪ ಹೊರಟ್ಟಿ, ರಾಜು, ಸಂತೋಷ ತ್ಯಾಪ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net