ಬಾವಿ ನೀರಿನ ಶುದ್ಧತೆ ಪರಿಶೀಲಿಸಿ ಪೂರೈಸಿ

ದೇವದುರ್ಗ ತಾಲೂಕು ಜಾಲಹಳ್ಳಿಗೆ ಸಹಾಯಕ ಆಯುಕ್ತ ಗಜಾನನ ಬಾಲೆ ಭೇಟಿ ನೀಡಿ ಕುಡಿವ ನೀರಿನ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾಪಂ ಇಒ ಬಸವರಾಜ ಹಟ್ಟಿ, ಜಿಪಂ ಆರ್‌ಡಬ್ಲುೃಎಸ್ ಎಇ ಹೀರಾಲಾಲ್, ಜೆಇ ಜೈಧರ್, ಪಿಡಿಒ ನರಸಪ್ಪ, ಕಂದಾಯ ನಿರೀಕ್ಷಕ ದೇವರೆಡ್ಡಿ ಇದ್ದರು.

Published on

ದೇವದುರ್ಗ: ಜಾಲಹಳ್ಳಿ ಗ್ರಾಮದ ಪುರಾತನ ಬಾವಿ ನೀರಿನ ಶುದ್ಧತೆ ಬಗ್ಗೆ ಖಾತ್ರಿಪಡಿಸಿಕೊಂಡು ವಿವಿಧ ವಾರ್ಡ್‌ಗಳಿಗೆ ಸರಬರಾಜು ಮಾಡಬೇಕು ಎಂದು ಅಧಿಕಾರಿಗಳಿಗೆ ಸಹಾಯಕ ಆಯುಕ್ತ ಗಜಾನನ ಬಾಲೆ ಸೂಚಿಸಿದರು.

ತಾಲೂಕಿನ ಜಾಲಹಳ್ಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಕಳೆದ ವರ್ಷ ಇದೇ ಬಾವಿಯಿಂದ ನೀರು ಪೂರೈಕೆ ಮಾಡಿದ್ದು, ನೀರು ಕುಡಿದು ಹಲವರು ಅಸ್ವಸ್ಥಗೊಂಡಿದ್ದರು. ಈ ಹಿನ್ನೆಲೆಯಲ್ಲಿ ನೀರಿನ ಮೂಲಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಬೋರ್‌ವೆಲ್ ಸುಸ್ಥಿತಿಯಲ್ಲಿರುವಂತೆ ನೋಡಿಕೊಂಡು ಅಗತ್ಯಕ್ಕನುಸಾರ ನೀರು ಪೂರೈಸಬೇಕು. ನೀರು ವ್ಯರ್ಥ ಮಾಡದಿರುವಂತೆ ಜನರಿಗೆ ಅರಿವು ಮೂಡಿಸಬೇಕು ಎಂದರು.

ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾಪಂ ಇಒ ಬಸವರಾಜ ಹಟ್ಟಿ, ಜಿಪಂ ಆರ್‌ಡಬ್ಲುೃಎಸ್ ಎಇ ಹೀರಾಲಾಲ್, ಜೆಇ ಜೈಧರ್, ಪಿಡಿಒ ನರಸಪ್ಪ, ಕಂದಾಯ ನಿರೀಕ್ಷಕ ದೇವರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net