ಅನುದಾನ ನೀಡುವಲ್ಲಿ ಸರ್ಕಾರದಿಂದ ತಾರತಮ್ಯ

Devadurga disabled people meeting
ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಅಂಗವಿಕಲರ ಸಮಾಲೋಚನಾ ಸಭೆಯಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಉಪಾಧ್ಯಕ್ಷ ಕರಿಯಪ್ಪ ಅಚ್ಚೊಳ್ಳಿ ಮಾತನಾಡಿದರು. ತಾಲೂಕು ಅಧ್ಯಕ್ಷ ವೆಂಕೋಬ ನಾಯಕ, ಪ್ರಮುಖರಾದ ಡಾಕೋಜಿ ರಾಠೋಡ್, ರಂಗಪ್ಪ ಇರಬಗೇರಾ, ಶಿವಪ್ಪ ಯರಗುಡ್ಡ, ಗಂಗಾಧರ ಬಡಿಗೇರ್, ಸಾಬಣ್ಣ, ಹನುಮಂತ ಬುಂಕಲದೊಡ್ಡಿ ಇದ್ದರು.
Published on

ದೇವದುರ್ಗ: ಅಂಗವಿಕಲರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಮೀಸಲಿದ್ದ ಅಲ್ಪಸ್ವಲ್ಪ ಅನುದಾನವೂ ಅಧಿಕಾರಿಗಳ ಬೇಜವಾಬ್ದಾರಿ ಯಿಂದ ಸರಿಯಾಗಿ ಬಳಕೆ ಯಾಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಅಂಗವಿ ಕಲರ ಹಾಗೂ ಪಾಲಕರ ಒಕ್ಕೂಟದ ಉಪಾಧ್ಯಕ್ಷ ಕರಿಯಪ್ಪ ಅಚ್ಚೊಳ್ಳಿ ಆರೋಪಿಸಿದರು.

ಜಾಲಹಳ್ಳಿ ಪ್ರವಾಸಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂಗವಿಕಲರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಸರ್ಕಾರ ಅಂಗವಿಕಲರಿಗೆ ಸಾಕಷ್ಟು ಸೌಲಭ್ಯ ಘೋಷಣೆ ಮಾಡಿದೆ. ಆದರೆ, ಜಾರಿಮಾಡುವಲ್ಲಿ ಇಚ್ಛಾಶಕ್ತಿ ಕೊರತೆಯಿಂದ ಸೌಲಭ್ಯಗಳು ಸದ್ಬಳಕೆಯಾಗುತ್ತಿಲ್ಲ ಎಂದು ದೂರಿದರು.

ಪ್ರತಿ ಇಲಾಖೆಯಲ್ಲಿ ಅಂಗವಿಕಲರ ಅಭಿವೃದ್ಧಿಗಾಗಿ ಶೇ.5 ಅನುದಾನ ಮೀಸಲಿಡುವಂತೆ ಸರ್ಕಾರ ನಿರ್ದೇಶನ ಮಾಡಿದೆ. ಆದರೆ ಯಾವುದೇ ಸ್ಥಳೀಯ ಸಂಸ್ಥೆಗಳು ಅದನ್ನು ಬಳಸುತ್ತಿಲ್ಲ. ಗ್ರಾಪಂ ಆಡಳಿತದಲ್ಲಿ ಜಾರಿಯಾಗುತ್ತಿಲ್ಲ. ಅಂಗವಿಕಲರು ಕೂಡ ಸಮಾಜದ ನಾಗರಿಕರಾಗಿದ್ದು ವಿಶೇಷ ಕಾಳಜಿವಹಿಸಬೇಕು. ಅಂಗವಿಕಲರ ಪಾಲಕರ ಆರೈಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು. ಒಕ್ಕೂಟದ ಹೋಬಳಿ ಘಟಕದ ಅಧ್ಯಕ್ಷರಾಗಿ ಭೀಮರಾಯ ಮಕಾಶಿ, ಸಂಚಾಲಕರಾಗಿ ಮಲ್ಲಿಕಾರ್ಜುನ ಅವರನ್ನು ಆಯ್ಕೆ ಮಾಡಲಾಯಿತು. ಪ್ರಮುಖರಾದ ಚಂದ್ರಶೇಖರ, ಶಿವರಾಜ, ಸಿದ್ದಣ್ಣ ಹೊಸೂರು, ಮೋಹನ್ ಸೋಮನ ಮರಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net