

ದೇವದುರ್ಗ: ಪ್ರಧಾನಿ ನರೇಂದ್ರ ಮೋದಿ ದಿಟ್ಟ ಆಡಳಿತದಿಂದ ಜಗತ್ತು ಭಾರತದತ್ತ ತಿರುಗಿ ನೋಡುತ್ತಿದೆ. ಅವರ ಆಡಳಿತದಿಂದ ದೇಶದ ಪ್ರತಿ ನಾಗರಿಕನಿಗೂ ಸುರಕ್ಷತೆ ದೊರೆತಿದೆ ಎಂದು ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಬಿಜೆಪಿ ಮಂಡಲ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಶನಿವಾರ ಮಾತನಾಡಿದರು. ಮೋದಿ ಅವರು 11 ವರ್ಷಗಳಿಂದ ಒಂದೂ ರಜೆ ಮಾಡದೆ ದೇಶಕ್ಕಾಗಿ ದುಡಿಯುತ್ತಿದ್ದಾರೆ.
ದೇಶದ 80 ಕೋಟಿ ಜನರಿಗೆ ಪಡಿತರ ವಿತರಣೆ, ರೈತರಿಗೆ ವಾರ್ಷಿಕ 6 ಸಾವಿರ ರೂ. ಪ್ರೋತ್ಸಾಹಧನ, ಜನಧನ ಖಾತೆ ಸೇರಿ ಜನರಿಗಾಗಿ ನೂರಾರು ಯೋಜನೆ ಜಾರಿಗೊಳಿಸಿದ್ದಾರೆ. ಯಡಿಯೂರಪ್ಪ ಸಿಎಂ ಇದ್ದಾಗ ರೈತರು, ಅವರ ಮಕ್ಕಳಿಗೆ ವಿಶೇಷ ಯೋಜನೆ ರೂಪಿಸಿದ್ದರು.
ಸಾವಿರಾರು ಕೋಟಿ ರೂ. ನೀರಾವರಿ ಯೋಜನೆಗೆ ಮೀಸಲಿಟ್ಟಿದ್ದರು. ಆದರೆ, ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಜನರನ್ನು ಸಂಕಷ್ಟಕ್ಕೆ ದೂಡಿದೆ. ಸಿಎಂ ಸಿದ್ದರಾಮಯ್ಯ ಮುಂದುವರಿಯಲು ಯೋಗ್ಯರಲ್ಲ ಎಂದು ಟೀಕಿಸಿದರು.
ಮಾಜಿ ಶಾಸಕ ಕೆ.ಶಿವನಗೌಡ ನಾಯಕ ಮಾತನಾಡಿ, ನಾನು ಈ ಹಿಂದೆ ಕಾಂಗ್ರೆಸ್‌ನ ಪದಾಧಿಕಾರಿಯಾಗಿ ಸಣ್ಣ ಹುದ್ದೆಗೆ ನಾಯಕರ ಮನೆಮನೆಗೆ ಅಲೆದೆ. ನನಗ್ಯಾವ ಪೋಸ್ಟ್ ಸಿಗಲಿಲ್ಲ. ಆದರೆ ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಗುರುತಿಸಿ ಹುದ್ದೆ ನೀಡಲಾಗುತ್ತಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಡಾ.ಶರಣಬಸವ ಪಾಟೀಲ್ ಜೋಳದಹೆಡಗಿ ಮಾತನಾಡಿದರು. ಪ್ರಮುಖರಾದ ತಿಪ್ಪರಾಜ ಹವಾಲ್ದಾರ್, ರಮಾನಂದ ಯಾದವ್, ಶ್ಯಾಮ್‌ರಾವ್ ಕುಲಕರ್ಣಿ, ಅಮರೇಶ ಬಲ್ಲಿದವ್, ಸಂತೋಷ ರಾಜಗುರು, ಶಿವಬಸಪ್ಪ ಮಾಪಾ, ಕೆ.ಕರಿಯಪ್ಪ, ಸಂಜೀವರೆಡ್ಡಿ ಸಾಹುಕಾರ, ಶಿವಕುಮಾರ ಪಾಣಿ, ಬಸವರಾಜ ಅಕ್ಕರಕಿ, ಶರಣಗೌಡ ಮದರಕಲ್, ಜಂಬಣ್ಣ ನಿಲೋಗಲ್ ಇತರರಿದ್ದರು.