

ದೇವದುರ್ಗ: ಬಿಜೆಪಿ ದೇವದುರ್ಗ ಮಂಡಲ ಅಧ್ಯಕ್ಷರಾಗಿ ಕಲಬುರಗಿ ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಶರಣಬಸವ ಪಾಟೀಲ್ ಜೋಳದಹೆಡಗಿ ನೇಮಕಗೊಂಡಿದ್ದಾರೆ.
ಶರಣಬಸವ ಜೋಳದಹೆಡಗಿ, ಮಾಜಿ ಸಚಿವ ಕೆ.ಶಿವನಗೌಡ ನಾಯಕರ ಆಪ್ತರಾಗಿದ್ದು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದರು. ಪ್ರಕಾಶ ಪಾಟೀಲ್ ಜೇರಬಂಡಿ ನಂತರ ಜಂಬಣ್ಣ ನಿಲೋಗಲ್ ಸತತ ಮೂರು ಅವಧಿಗೆ ಮಂಡಲ ಅಧ್ಯಕ್ಷರಾಗಿದ್ದರು.
ಬಿಜೆಪಿ ನಾಯಕರು ಮತ್ತೆ ಲಿಂಗಾಯತ ಸಮುದಾಯಕ್ಕೆ ಮಣೆ ಹಾಕಿದ್ದಾರೆ. ನಾನಾ ಲೆಕ್ಕಾಚಾರ ಹಾಕಿದ ಬಿಜೆಪಿ ನಾಯಕರು ಮಾಜಿ ಸಚಿವ ಶಿವನಗೌಡ ನಾಯಕ ಸಲಹೆಯಂತೆ ನೇಮಕ ಮಾಡಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಶಿಸ್ತಿನಿಂದ ಕೆಲಸ ಮಾಡಿದ್ದರಿಂದ ವರಿಷ್ಠರು ನನ್ನ ಮೇಲೆ ಭರವಸೆ ಇಟ್ಟು ಜವಾಬ್ದಾರಿ ನೀಡಿದ್ದಾರೆ ಎಂದು ಶರಣಬಸವ ಪಾಟೀಲ್ ಜೋಳದಹೆಡಗಿ ತಿಳಿಸಿದ್ದಾರೆ.