ತೆರಿಗೆ ಪಾವತಿಸಿ ಅಭಿವೃದ್ಧಿಗೆ ಕೈಜೋಡಿಸಿ

Devadurga Tax paid Campaign
ದೇವದುರ್ಗ ತಾಲೂಕಿನ ಶಾವಂತಗೇರಾದಲ್ಲಿ ತೆರಿಗೆ ವಸೂಲಿ ವಿಶೇಷ ಅಭಿಯಾನದಲ್ಲಿ ತಾಪಂ ಸಹಾಯಕ ನಿರ್ದೇಶಕಿ ಮಹೇಶ್ವರಿ ಮನೆಮನೆಗೆ ತೆರಳಿ ಜಾಗೃತಿ ಮೂಡಿಸಿದರು. ಪಿಡಿಒ ಶಂಶುದ್ದೀನ್, ಡಾಟಾ ಎಂಟ್ರಿ ಆಪರೇಟರ್ ವಿಶ್ವನಾಥ ಸ್ವಾಮಿ, ಕರವಸೂಲಿಗಾರ ಪ್ರಭು ನಾಯಕ, ಲಿಂಗಣ್ಣ ಸಾಹುಕಾರ ಇತರರಿದ್ದರು.
Published on

ದೇವದುರ್ಗ: ಸಾರ್ವಜನಿಕರು ಸ್ಥಳೀಯ ಆಡಳಿತಕ್ಕೆ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿ ಮಾಡುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಾಪಂ ಸಹಾಯಕ ನಿರ್ದೇಶಕಿ ಮಹೇಶ್ವರಿ ಹೇಳಿದರು.

ತಾಲೂಕಿನ ಶಾವಂತಗೇರಾ ಗ್ರಾಪಂನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ತಾಪಂನಿಂದ ಗುರುವಾರ ಹಮ್ಮಿಕೊಂಡಿದ್ದ ತೆರಿಗೆ ವಸೂಲಿ ವಿಶೇಷ ಅಭಿಯಾನದಲ್ಲಿ ಮಾತನಾಡಿದರು. ಸಾರ್ವಜನಿಕರು ಆಸ್ತಿ ತೆರಿಗೆ, ನೀರಿನ ಕರ, ವಾಣಿಜ್ಯ ಉದ್ಯಮದ ತೆರಿಗೆ ಸಮಯಕ್ಕೆ ಸರಿಯಾಗಿ ಪಾವತಿ ಮಾಡಬೇಕು. ತೆರಿಗೆಯಿಂದಲೇ ಅಭಿವೃದ್ಧಿ ಸಾಧ್ಯ. ತೆರಿಗೆ ಬಾಕಿ ಉಳಿದ ಕಾರಣ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಜಿಲ್ಲಾದ್ಯಂತ ತೆರಿಗೆ ವಸೂಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜನರ ಮನೆಮನೆಗೆ ತೆರಳಿ ಜಾಗೃತಿ ಮೂಡಿಸುವ ಜತೆಗೆ ವಸೂಲಿ ಮಾಡಲಾಗುತ್ತಿದೆ. ಎಲ್ಲರೂ ಸಹಕರಿಸಿ ಎಂದು ಸಲಹೆ ನೀಡಿದರು.

ಪಿಡಿಒ ಶಂಶುದ್ದೀನ್, ಡಾಟಾ ಎಂಟ್ರಿ ಆಪರೇಟರ್ ವಿಶ್ವನಾಥ ಸ್ವಾಮಿ, ಕರವಸೂಲಿಗಾರ ಪ್ರಭು ನಾಯಕ, ಲಿಂಗಣ್ಣ ಸಾಹುಕಾರ, ಬೂದಯ್ಯಸ್ವಾಮಿ, ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net