ಲಂಚಕ್ಕೆ ಆಸೆ ಪಟ್ಟು ಭ್ರಷ್ಟರಾಗದಿರಿ

DHP 27-1
Published on

ದೇವರಹಿಪ್ಪರಗಿ: ಸಾರ್ವಜನಿಕರಿಗೆ ಸಕಾಲಿಕವಾಗಿ, ಪಾರದರ್ಶಕ ಆಡಳಿತ ಸೇವೆ ನೀಡಲು ಸರ್ಕಾರಿ ಸಿಬ್ಬಂದಿ ಮುಂದಾಗಬೇಕು ಎಂದು ವಿಜಯಪುರದ ಭ್ರಷ್ಟಾಚಾರ ನಿಗ್ರಹ ದಳದ ಡಿಎಸ್‌ಪಿ ಮಂಜುನಾಥ ಗಂಗಲ್ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರೋಧಿಜಾಗೃತಿ ಸಪ್ತಾಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕ ನೌಕರರು ಯಾವುದೇ ಆಮಿಷಕ್ಕೆ ಒಳಗಾಗದೆ, ಅನಗತ್ಯ ವಿಳಂಬ ನೀತಿ ಅನುಸರಿಸದೆ ಕಾರ್ಯ ನಿರ್ವಹಣೆ ಮಾಡುವುದು ಇಂದು ಅತ್ಯಗತ್ಯವಾಗಿದೆ. ಸಾರ್ವಜನಿಕರಿಗೆ ಲಂಚದ ಹಣಕ್ಕಾಗಿ ಒತ್ತಾಯಿಸುವುದಾಗಲಿ, ಸಾರ್ವಜನಿಕ ಹುದ್ದೆಯನ್ನು ಬಳಸಿಕೊಂಡು ಆಕ್ರಮ ಆಸ್ತಿ ಸಂಪಾದಿಸಿದ್ದು ಮತ್ತು ಹುದ್ದೆ ದುರ್ಬಳಕೆ ಮಾಡಿಕೊಂಡು ಅವ್ಯವಹಾರ ಮಾಡುತ್ತಿರುವುದು ಕಂಡು ಬಂದಲ್ಲಿ ನಿಗ್ರಹದಳ ಅಗತ್ಯ ಕ್ರಮ ಕೈಗೊಳ್ಳುತ್ತದೆ. ಸಿಬ್ಬಂದಿ ಸಾರ್ವಜನಿಕರಿಗೆ ದಕ್ಷ ಆಡಳಿತ ನೀಡಲು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಬಿ.ಎಸ್. ಕಡಕಭಾವಿ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಪಿಎಸ್‌ಐ ಪರಮೇಶ್ವರ ಕವಟಗಿ ಮಾತನಾಡಿದರು. ಉಪತಹಸೀಲ್ದಾರ್ ಇಂದಿರಾ ಬಳಗಾನೂರ, ಶಿರಸ್ತೆದಾರರಾದ ಜಿ.ಎಸ್. ನಾಯಕ, ಎಸ್.ಬಿ. ಹಾರಿವಾಳ, ಸಿಬ್ಬಂದಿ ಎಸ್.ಆರ್. ಗಲಗಲಿ, ವಿದ್ಯಾ ಹಿಪ್ಪರಗಿ, ಜಿ.ಬಿ. ವಡ್ಡರ, ಎಸ್.ಎಸ್. ಬಿರಾದಾರ, ಎನ್.ಎಂ. ಡಿಗ್ಗಾಂವಿ, ಆರತಿ ತೆನ್ನಳ್ಳಿ, ವಿ.ಜಿ. ಕಾಂಬ್ಳೆ, ಬಿ.ಎಚ್. ಬಾಟಿ, ಕಾಶಿನಾಥ ಹಿರೇಮಠ, ಪ್ರಕಾಶ ಹೊಸಕೇರಿ ಸೇರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net