ಅಂಗವಿಕಲರಿಗೆ ಪೀಠೋಪಕರಣ ವಿತರಣೆ

DHP 14-1
Published on

ದೇವರಹಿಪ್ಪರಗಿ: ಅಂಗವಿಕಲರ ಅಗತ್ಯತೆಗಳಿಗೆ ಅನುಸಾರವಾಗಿ ಪೀಠೋಪಕರಣಗಳನ್ನು ವಿತರಿಸಿ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ರಾಜೇಶ್ವರಿ ಹೇಳಿದರು.
ಪಟ್ಟಣದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರದಲ್ಲಿ ಮಂಗಳವಾರ ಜನಮಂಗಲ ಕಾರ್ಯಕ್ರಮದಡಿ ಅಂಗವಿಕಲರಿಗೆ ಗಾಲಿ ಕುರ್ಚಿ ಸೇರಿದಂತೆ ವಿವಿಧ ಪಿಠೋಪಕರಣಗಳನ್ನು ವಿತರಿಸಿ ಅವರು ಮಾತನಾಡಿದರು.
ಸಂಗನಗೌಡ ಪಾಟೀಲ, ಚನ್ನಯ್ಯ ಮಲ್ಲಿಕಾರ್ಜುನಮಠ, ಶರಣಮ್ಮ ದೇವೂರ, ನೀಲಮ್ಮ ಬಿರಾದಾರ, ಗೀತಾ ಹಳ್ಳಿ, ಭಾಗೀರಥಿ ದೇಗಿನಾಳ, ಲಾನುಭವಿಗಳಾದ ರೇಣುಕಾ ಕುಂಬಾರ, ಶ್ರೀಶೈಲ ಬನಗೊಂಡ, ಕಮಲಾಬಾಯಿ ವಗ್ಗರ, ಯುವರಾಜ ಹುಮನಾಬಾದ, ದಶರಥ ಘೋರ್ಪಡೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net