ಸಚಿವ ಸ್ಥಾನ ನೀಡಲು ಆಗ್ರಹಿಸಿ ಪ್ರತಿಭಟನೆ

DHP 12-1
Published on

ದೇವರಹಿಪ್ಪರಗಿ: ರಾಜ್ಯ ಸಚಿವ ಸಂಪುಟದಲ್ಲಿ ಪಂಚಮಸಾಲಿ ಸಮುದಾಯದವರನ್ನು ಕಡೆಗಣಿಸಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಬುಧವಾರ ಪಂಚಮಸಾಲಿ ಸಮುದಾಯ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ನೂರಾರು ಪಂಚಮಸಾಲಿ ಸಮುದಾಯದ ಯುವಕರು, ಸಾರ್ವಜನಿಕರು ಸೇರಿ ಪಟ್ಟಣದ ಬೇವಿನಕಟ್ಟಿಯಿಂದ ಮೇನ್ ಬಜಾರ್ ಬಸ್ ಮೂಲಕ ರಾಷ್ಟ್ರೀಯ ಹೆದ್ದಾರಿ 50ರ ಮೂಲಕ ಡಾ. ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು.
ಪಂಚಮಸಾಲಿ ಸಮುದಾಯದ ಯುವ ಮುಖಂಡರಾದ ಸುರೇಶಗೌಡ ಪಾಟೀಲ ವಿನೋದಗೌಡ ಪಾಟೀಲ, ರಾಜ್ಯ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳು ನಮ್ಮ ಸಮುದಾಯದವರನ್ನು ಕಡೆಗಣಿಸುತ್ತಿರುವುದು ಖಂಡನೀಯ. ಕೂಡಲೇ ನಮ್ಮ ಸಮುದಾಯದ ಯಾರಿಗಾದರೂ ಇಬ್ಬರಿಗೆ ಸಚಿವ ಸ್ಥಾನ ನೀಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಹಾಂತೇಶ ವಂದಾಲ, ದಿನೇಶ ಪಾಟೀಲ, ಮುರುಗೇಶ ಅಂಗಡಿ, ಮಡುಗೌಡ ಬಿರಾದಾರ, ರಮೇಶ ಮಾಳನೂರ, ಶ್ರೀಕಾಂತ ಸೌದಿ, ಗುರುರಾಜ ಆಕಳವಾಡಿ, ನಿಂಗು ಯಂಬತ್ನಾಳ, ಅಶೋಕ ರಾಮಗೊಂಡ, ಬಸವರಾಜ ಹಳೆಮನಿ, ಶ್ರೀಶೈಲ ರೂಡಗಿ, ಮಂಜು ಇಂಗಳಗಿ, ಅಪ್ಪು ಪಾಟೀಲ, ಸತೀಶ ಬುದಿಹಾಳ, ರವಿ ನಾಗಾರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net