

ಹೂವಿನಹಿಪ್ಪರಗಿ: ದೇವರಹಿಪ್ಪರಗಿ ಮತಕ್ಷೇತ್ರದ ನಾಗರಾಳ ಡೋಣ ಗ್ರಾಮದಲ್ಲಿ ಲೆಕ್ಕ ಶೀರ್ಷಿಕೆ 3054ರ ಅಡಿಯಲ್ಲಿ ಮಂಜೂರಾದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಸೋಮನಗೌಡ ಪಾಟೀಲರ ಸಹೋದರ ಸಾಹೇಬಗೌಡ ಪಾಟೀಲ(ಸಾಸನೂರ) ಭೂಮಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ನಾಗರಾಳ ಡೋಣ ಗ್ರಾಮದ ಸಮಗ್ರ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಹಂತ-ಹಂತವಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ದೊರಕಿಸಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು. ರಾಜುಗೌಡ ನಾಡಗೌಡ, ಭೀಮನಗೌಡ ಪಾಟೀಲ, ಗುರನಗೌಡ ಪಾಟೀಲ, ಶರಣಪ್ಪ ಕುಮಟಗಿ, ಶಿವಯ್ಯ ಹಿರೇಮಠ, ರಾಮನಗೌಡ ನಾವದಗಿ, ರಾವುಸಾಬ ಪೊಲೀಸ್, ಬಸಣ್ಣ ಕಲ್ಲಪ್ಪಗೋಳ, ನಿಂಗನಗೌಡ ಮೂಲಿಮನಿ, ದ್ಯಾಮನಗೌಡ ಜಾಲವಾದಿ ಮತ್ತಿತರರಿದ್ದರು.
ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲರ ಸಹೋದರ ಸಾಹೇಬಗೌಡ ಪಾಟೀಲ (ಸಾಸನೂರ) ಸಿಂಧಗೇರಿ ಗ್ರಾಮದಲ್ಲಿ 2020-21ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯ ಅನುದಾನದಡಿ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಡಿಎಸ್‌ಎಸ್ ಮುಖಂಡ ಗುರುರಾಜ ಗುಡಿಮನಿ, ರಾಜುಗೌಡ ನಾಡಗೌಡ, ಸಂಗನಗೌಡ ಧನ್ನೂರ, ರಾಮನಗೌಡ ನಾವದಗಿ, ದತ್ತ ಡೋಣೇಕರ, ಸಿ.ಎಸ್. ಕಚನೂರ ಮತ್ತಿತರರಿದ್ದರು.