ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ

Helmat
Published on

ದೇವರಹಿಪ್ಪರಗಿ: ಜೀವನ ಅಮೂಲ್ಯವಾದುದು. ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ವಾಹನ ಚಾಲನೆ ಮಾಡಬೇಕೆಂದು ಲಕ್ಷ್ಮೀ ಪೆಟ್ರೋಲಿಯಂನ ಪ್ರಶಾಂತ ಬಿರಾದಾರ ಹೇಳಿದರು.

ಪಟ್ಟಣದ ಲಕ್ಷ್ಮೀ ಪೆಟ್ರೋಲಿಯಂನಲ್ಲಿ ಗುರುವಾರ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜನವರಿ ತಿಂಗಳಿಂದ ಫೆಬ್ರವರಿ 17ರವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಆಚರಿಸಲಾಗುತ್ತಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಅಪಘಾತದಲ್ಲಿ ಮರಣ ಹೊಂದಿದವರಲ್ಲಿ ಬೈಕ್ ಸವಾರರ ಪ್ರಮಾಣ ಅಧಿಕವಿದೆ. ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದರು. ನಂತರ ದ್ವಿಚಕ್ರವಾಹನ ಸವಾರರಿಗೆ ಉಚಿತ ಹೆಲ್ಮೆಟ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಕೆ. ಸುಮೀತ್ ವಸಂತ ನಾಡಗೌಡ, ರವಿ ಮೊಪಗಾರ, ಪರಶುರಾಮ ನಾಟೀಕಾರ ಹಾಗೂ ಪಂಪ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net