ತೊಗರಿ ಖರೀದಿ ಕೇಂದ್ರದ ಸದ್ಬಳಕೆ ಮಾಡಿಕೊಳ್ಳಿ

DHP 19-1
Published on

ದೇವರಹಿಪ್ಪರಗಿ: ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳ ರೈತರ ಅನುಕೂಲಕ್ಕಾಗಿ ತೊಗರಿ ಖರೀದಿ ಕೇಂದ್ರ ಆರಂಭಿಸಿದ್ದು, ಅದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೊಸೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕಾಶೀನಾಥ ಮಸಬಿನಾಳ ಹೇಳಿದರು.
ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಹೊಸೂರ ಪಿಕೆಪಿಎಸ್ ತೊಗರಿ ಖರೀದಿ ಕೇಂದ್ರದ ಆವರಣದಲ್ಲಿ ಬುಧವಾರ ತೊಗರಿ ಖರೀದಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ತೊಗರಿ ಖರೀದಿ ಕೇಂದ್ರದಲ್ಲಿ ಪ್ರತಿಯೊಬ್ಬ ರೈತನ ತೊಗರಿ ಖರೀದಿಯಾಗುವವರೆಗೂ ಎಲ್ಲವನ್ನು ಪ್ರಾಮಾಣಿಕವಾಗಿ ಖರೀದಿಸಲಾಗುವುದೆಂದು ತಿಳಿಸಿದರು. ಸದಯ್ಯನಮಠದ ವೀರಗಂಗಾಧರ ಸ್ವಾಮೀಜಿ ಖರೀದಿ ಯಂತ್ರಕ್ಕೆ ಪೂಜೆ ಸಲ್ಲಿಸಿ, ಚಾಲನೆ ನೀಡಿದರು.
ಬಾಬುಗೌಡ ಜಿಡ್ಡಿಮನಿ, ಬಸಯ್ಯ ಮಲ್ಲಿಕಾರ್ಜುನಮಠ, ಪಾಂಡುರಂಗ ದೇಶಪಾಂಡೆ, ಬಂಡೆಪ್ಪ ದಿಂಡವಾರ, ಶ್ರೀಶೈಲ ದೇಸಾಯ, ಚನ್ನಪ್ಪ ದೇಸಾಯಿ, ಮಲ್ಲಪ್ಪ ಮಂಗಳೂರ, ಬಾಬು ಸೌದಿ, ಕಾಸಪ್ಪ ಜಲಕತ್ತಿ, ಸಂಗು ಯಂಭತ್ನಾಳ, ಬಷೀರ ಬೇಪಾರಿ, ಶ್ರೀಧರ ನಾಡಗೌಡ, ಸೋಮಶೇಖರ ಹಿರೇಮಠ, ವಿನೋದ ಪಾಟೀಲ, ಸಿದ್ದು ಮಸಬಿನಾಳ, ರಮೇಶ ಮಶಾನವರ, ಬಸವರಾಜ ಹಳಿಮನಿ, ಅಜೀಜ್ ಯಲಗಾರ, ಸಂತೋಷ ದೇಸಾಯಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net