ಪಕ್ಷವಿರೋಧಿ ಚಟುವಟಿಕೆ ವಿರೋಧಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

Protest
Published on

ದೇವರಹಿಪ್ಪರಗಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಆಯ್ಕೆಯ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಬಿಜೆಪಿಯ ಜಿಪಂ ಸದಸ್ಯರ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಮೋಹರೆ ಹನುಂತರಾಯ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ಪಕ್ಷ ವಿರೋಧ ಮಾಡಿದ ಜಿಪಂ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿ, ಸದಸ್ಯರ ಪ್ರತಿಕೃತಿ ದಹಿಸಿದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಮೇಶ ಮಸಬಿನಾಳ ಮಾತನಾಡಿ, ಸಾವಿರಾರು ನಿಷ್ಠಾವಂತ ಕಾರ್ಯಕರ್ತರ ಶ್ರಮದಿಂದ ಕಮಲದ ಚಿಹ್ನೆಯ ಅಡಿಯಲ್ಲಿ ಗೆದ್ದು ಬಂದು ಈಗ ದುಡ್ಡಿನ ಆಶೆಗಾಗಿ ಬೇರೆ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಅಧ್ಯಕ್ಷರನ್ನು ಆಯ್ಕೆ ಮಾಡಿ ಪಕ್ಷ ವಿರೋದಿ ಚಟುವಟಿಕೆ ಮಾಡಿ ನಿಷ್ಠಾವಂತ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣಾರಾಗಿದ್ದಾರೆ. ಬರುವ ಚುನಾವಣೆಯಲ್ಲಿ ಈ ಸದಸ್ಯರುಗಳಿಗೆ ತಕ್ಕ ಪಾಠ ಕಲಿಸುತ್ತೆವೆ ಎಂದು ಹೇಳಿದರು.
ಶರಣಗೌಡ ಬಿರಾದಾರ, ಪ್ರಕಾಶ ದೊಡ್ಡಮನಿ, ಹುಸೇನ್ ಗೌಂಡಿ ಮಾತನಾಡಿದರು. ಮಂಡಲ ಅಧ್ಯಕ್ಷ ಭೀಮನಗೌಡ ಸಿದರೆಡ್ಡಿ, ಪಪಂ ಸದಸ್ಯ ಶರಣು ಕಕ್ಕಸಗೇರಿ, ಬಿಜೆಪಿ ಮುಖಂಡರಾದ ಬಸವರಾಜ ಕಲ್ಲೂರ, ರಾಜು ಮೆಟಗಾರ, ರಾವುತ ಅಗಸರ, ಭೀಮನಗೌಡ ಸಿದರೆಡ್ಡಿ, ಯಲ್ಲು ಭಾವುರ, ರಮೇಶ ರೋಳ್ಳಿ, ಬಸನಗೌಡ ಸಿದರೆಡ್ಡಿ, ಕಾಶೀನಾಥ ಕೋರಿ, ಕಿರಣ ಪಾಟೀಲ, ರಾಜು ಸಿದರೆಡ್ಡಿ, ಮುದಕಪ್ಪ ಮೊಪಗಾರ, ರಮೇಶ ರಾಠೋಡ, ಮಡು ಬಿರಾದಾರ, ಸಂಗು ಹಳಿಮನಿ ಸೇರಿ ಹಲವಾರು ಬಿಜೆಪಿ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net