

ದೇವರಹಿಪ್ಪರಗಿ: ತಳವಾರ ಮತ್ತು ಪರಿವಾರ ಸಮುದಾಯಗಳಿಗೆ ಎಸ್‌ಟಿ ಪ್ರಮಾಣಪತ್ರ ಶೀಘ್ರ ವಿತರಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಯುವ ಕಾಂಗ್ರೆಸ್ ವತಿಯಿಂದ ಉಪತಹಸೀಲ್ದಾರ್ ಇಂದಿರಾ ಬಳಗಾನೂರ ಅವರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದಲ್ಲಿ ಗುರುವಾರ ರಾಜ್ಯ ಯುವ ಕಾಂಗ್ರೆಸ್ ಸದಸ್ಯರು ಜಂಟಿ ಕಾರ್ಯದರ್ಶಿ ಸಂಗಮೇಶ ಛಾಯಾಗೋಳ ನೇತೃತ್ವದಲ್ಲಿ ಡಾ. ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಹೊರಟು ತಹಸೀಲ್ದಾರ್ ಕಚೇರಿ ತಲುಪಿದರು.
ಸಂಗಮೇಶ ಛಾಯಾಗೋಳ ಮಾತನಾಡಿ, ತಳವಾರ ಮತ್ತು ಪರಿವಾರ ಸಮುದಾಯಗಳು ಆರ್ಥಿಕ, ಸಾಮಾಜಿಕ, ಶೈಕ್ಷಣಿಕಗಾಗಿ ಹಿಂದುಳಿದವುಗಳಾಗಿದ್ದು, ಈ ಎಲ್ಲ ಮಾನದಂಡಗಳ ಮೇಲೆ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದರು. ರಾಜ್ಯದಲ್ಲಿ ಅಧಿಕಾರಿಗಳು ಪ್ರಮಾಣ ಪತ್ರ ವಿತರಣೆಗೆ ಹಿಂದೇಟು ಹಾಕುತ್ತಿದ್ದಾರೆ. ಈಗ ಪ್ರವರ್ಗ-1 ರಿಂದ ಪರಿವಾರ ಮತ್ತು ತಳವಾರ ಸಮುದಾಯಗಳನ್ನು ತೆಗೆದುಹಾಕಿ ಕೂಡಲೇ ಎಸ್‌ಟಿ ಪ್ರಮಾಣಪತ್ರ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳರು ಕೂಡಲೇ ಅಧಿಕಾರಿಗಳಿಗೆ ಸೂಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ಶಿವಶಂಕರ ಗಿಡಕಾರ, ರಾವುತರಾಯ ಬೋರಗಿ, ರಾವುತ ಮೆಟಗಾರ, ಬಸವರಾಜ ತಳವಾರ, ಪರಶುರಾಮ ಜಮಾದಾರ, ವಿಶ್ವನಾಥ ನಾಟೀಕಾರ, ಹಣಮಂತ ಕೋಟಾರಗಸ್ತಿ, ಸಂತೋಷ ನಾಟೀಕಾರ, ಅಶೋಕ ತಳವಾರ, ಕಂಠೆಪ್ಪ ತಳವಾರ, ಬಸವರಾಜ ಕೋಟಾರಗಸ್ತಿ, ಕಲ್ಲಪ್ಪ ನಾಯ್ಕೋಡಿ, ಸಿದ್ದಪ್ಪ ತಳವಾರ, ಸುನೀಲ ಸಾತಿಹಾಳ, ಸಂತೋಷ ಚಾಂದಕೊಟಗಿ, ಮುತ್ತಣ್ಣ ಸಾತಿಹಾಳ, ಲಕ್ಷ್ಮಣ ತಳವಾರ ಮತ್ತಿತರರಿದ್ದರು.