ಅಂಬಿಗರ ಚೌಡಯ್ಯನವರ ವೃತ್ತ ಅಲಂಕಾರಗೊಳಿಸಿ

DHP 18-2
Published on

ದೇವರಹಿಪ್ಪರಗಿ: ಪಟ್ಟಣದ ಅಂಬಿಗರ ಚೌಡಯ್ಯ ವೃತ್ತವನ್ನು ಪಪಂನಿಂದ ಅಲಂಕಾರಗೊಳಿಸಬೇಕೆಂದು ಆಗ್ರಹಿಸಿ ಗಂಗಾ ಸಮಾಜದ ಯುವಕರು ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಜ. 21 ರಂದು ಅಂಬಿಗರ ಚೌಡಯ್ಯನವರ ಜಯಂತಿ ಇದ್ದು, ಆದ್ದರಿಂದ ವಿಜಯಪುರ ರಸ್ತೆಯಲ್ಲಿರುವ ಅಂಬಿಗರ ಚೌಡಯ್ಯ ವೃತ್ತ ಅಲಂಕಾರಗೊಳಿಸುವ ಜತೆಗೆ ಸಮಾಜದ ಹಿರಿಯರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಕೂಲಿ ಕಬ್ಬಲಿಗ ಸಂಘರ್ಷ ಸಮಿತಿ ಉತ್ತರ ಕರ್ನಾಟಕ ಅಧ್ಯಕ್ಷ ರಾಜು ಮೆಟಗಾರ ಮಾತನಾಡಿ, 12ನೇ ಶತಮಾನದ ಶರಣರಲ್ಲಿಯೇ ನಿಜಶರಣ ಅನಿಸಿಕೊಂಡ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಪಪಂನಿಂದ ವಿದ್ಯುತ್, ಕುಡಿಯುವ ನೀರು ಸೇರಿ ಅಗತ್ಯ ಮೂಲಸೌಕರ್ಯ ಒದಗಿಸಬೇಕೆಂದು ಮನವಿ ಮಾಡಿದರು.
ಸಂಪತ್ ಜಮಾದಾರ, ಚಂದ್ರಕಾಂತ ಮೆಟಗಾರ, ಬಲಭೀಮ ದೇಗಿನಾಳ, ಮಲ್ಲು ನಾಟಿಕಾರ, ರವಿ ದಿನ್ನಿ, ರಾಹುಲ್ ಜಮಾದಾರ, ಉದಯಕುಮಾರ ಕೊಲ್ಹಾರ, ಸಾಯಬಣ್ಣ ತೋನಶ್ಯಾಳ, ಪ್ರದೀಪ ರೂಗಿ, ಜಟ್ಟು ಮೆಟಗಾರ, ಆನಂದ ಕಡ್ಲೇವಾಡ, ಶಂಕರ ಜಮಾದಾರ ಸೇರಿ ಮತ್ತಿತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net