

ದೇವರಹಿಪ್ಪರಗಿ: ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ಹಾಗೂ ಸ್ವಾತಂತ್ರೃಕ್ಕಾಗಿ ಮಾಡಿದ ಹೋರಾಟಗಳು ಯುವ ಪೀಳಿಗೆಗೆ ಸ್ಪೂರ್ತಿ ಎಂದು ತಹಸೀಲ್ದಾರ್ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳ 246ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಬ್ರಿಟಿಷರಿಗೆ ಮೊಟ್ಟ ಮೊದಲ ಸೋಲಿನ ರುಚಿ ತೋರಿಸುವುದರ ಮೂಲಕ ಸ್ವಾತಂತ್ರೃದ ರಣಕಹಳೆ ಮೊಳಗಿಸಿದ ಕೆಚ್ಚದೆಯ ಹೋರಾಟಗಾರ್ತಿ ಎಂದರು.
ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಕೆ.ಕುದರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಲಘಾಣದ ಎಸ್.ಬಿ.ಪಾಟೀಲ ವಿಶೇಷ ಉಪನ್ಯಾಸ ನೀಡಿದರು. ಸುನೀಲ ಮಾಗಿ ಹಾಗೂ ವಿದ್ಯಾರ್ಥಿನಿ ಸ್ನೇಹಾ ಬಿರಾದಾರ ತನ್ನ ಚುಟುಕು ಮಾತುಗಳಿಂದ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದ ಅಂಗವಾಗಿ ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರ ಭಾವಚಿತ್ರದ ಭವ್ಯ ಮೆರವಣಿಗೆ ಮೊಹರೆ ಹಣಮಂತ್ರಾಯ ವೃತ್ತದಿಂದ ಆರಂಭಗೊಂಡು ಚೆನ್ನಮ್ಮ ವೃತ್ತದಲ್ಲಿ ಕೊನೆಗೊಂಡಿತು.
ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಜ್ ಯಲಗಾರ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ, ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಗುರುರಾಜ್ ಆಕಳವಾಡಿ. ಪಟ್ಟಣ ಪಂಚಾಯಿತಿ ಸದಸ್ಯ ಕಾಸುಗೌಡ ಬಿರಾದಾರ (ಜಲಕತ್ತಿ), ತಾಲ್ಲೂಕು ಜಂಗಮಾಭಿವದ್ಧಿ ಸಂಘದ ಅಧ್ಯಕ್ಷ ಸೋಮಶೇಖರ ಹಿರೇಮಠ, ಬಂಡೆಪ್ಪ ಬಿರಾದಾರ(ದಿಂಡವಾರ), ವ್ಹಿ.ಕೆ.ಪಾಟೀಲ, ಶ್ರೀಶೈಲ ಮುಳಜಿ, ಪ್ರಕಾಶ ದಾನಗೊಂಡ, ವಿನೋದ ಪಾಟೀಲ, ಶ್ರೀಶೈಲ ದಾನಗೊಂಡ, ನಿಂಗು ಯಂಭತ್ನಾಳ, ಮಾಂತೇಶ ವಂದಾಲ, ವಿರೇಶ ಕುದರಿ, ರಮೇಶ ಮಾಳನೂರ, ಕಾಶೀಪತಿ ಕುದರಿ, ಪಂಚಾಕ್ಷರಿ ಮಿಂಚನಾಳ, ಕಾಶೀನಾಥ ರಾಮಗೊಂಡ, ಸೋಮು ದೇವೂರ, ಬಸವರಾಜ ಇಂಡಿ, ಮಡು ದಿಂಡವಾರ, ಮುನೀರ್ ಅಹ್ಮದ್ ಮಳಖೇಡ, ರಾಜು ಮೆಟಗಾರ, ಸಂಪತ್ ಜಮಾದಾರ ಇದ್ದರು.