ದೇವರಹಿಪ್ಪರಗಿ ಆಂಜನೇಯ ದೇಗುಲದಲ್ಲಿ ಕಾರ್ತಿಕೋತ್ಸವ

Devarahipparagi, Anjaneya Temple, Kartikotsava, HESCOM Office, Manate, Sripada Joshi, Vidyut Dipa,
ದೇವರಹಿಪ್ಪರಗಿ ಹೆಸ್ಕಾಂ ಕಚೇರಿ ಆವರಣದ ಆಂಜನೇಯ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಜರುಗಿತು. ಶ್ರೀಪಾದ ಜೋಷಿ, ಪ್ರಲ್ಹಾದ ಕುಲಕರ್ಣಿ, ಬಸವರಾಜ ಬಡಿಗೇರ, ಆನಂದ ಜೋಷಿ, ವಿದ್ಯಾಶ್ರೀ ಕುಲಕರ್ಣಿ ಇತರರಿದ್ದರು.
Published on

ದೇವರಹಿಪ್ಪರಗಿ: ಸ್ಥಳೀಯ ಹೆಸ್ಕಾಂ ಕಚೇರಿ ಆವರಣದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಭಕ್ತಿ, ಭಾವದೊಂದಿಗೆ ಕಾರ್ತಿಕೋತ್ಸವ ಸೋಮವಾರ ಆಚರಿಸಲಾಯಿತು.

ಆಂಜನೇಯ ದೇವರಿಗೆ ಬೆಳಗ್ಗೆ ವಿಶೇಷ ಕುಂಕುಮ ಪೂಜೆ, ಸಂಜೆ ಹಣತೆಯ ದೀಪ ಬೆಳಗಿಸಿ ಮಂತ್ರ ಘೋಷಗಳೊಂದಿಗೆ ಅರ್ಚಕ ಶ್ರೀಪಾದ ಜೋಷಿ ಕಾರ್ತಿಕೋತ್ಸವ ಆರಂಭಿಸಿದರು. ಭಕ್ತರಿಗೆ ಪನಿವಾರ ವಿತರಿಸಲಾಯಿತು.

ಕಳೆದ 20 ವರ್ಷಗಳಿಂದ ನಡೆದುಕೊಂಡು ಬಂದಿರುವ ಕಾರ್ತಿಕೋತ್ಸವದಲ್ಲಿ ಸುತ್ತಮುತ್ತಲಿನ ವಿವಿಧ ಬಡಾವಣೆಗಳ ಜನತೆ ದೀಪ ಬೆಳಗಿಸಿ ನಮಿಸಿದರು. ದೇವಸ್ಥಾನಕ್ಕೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ್ದು ವಿಶೇಷ ಗಮನ ಸೆಳೆಯಿತು.

ಶಿಕ್ಷಕರಾದ ಪ್ರಲ್ಹಾದ ಕುಲಕರ್ಣಿ, ಬಸವರಾಜ ಬಡಿಗೇರ, ಆನಂದ ಜೋಷಿ, ವಿದ್ಯಾಶ್ರೀ ಕುಲಕರ್ಣಿ, ಜ್ಯೋತಿ ಬಡಿಗೇರ, ರೂಪಾ ಅಸಂತಾಪುರ, ಸೋನಾಲಿ ಜೋಷಿ, ಭಾಗ್ಯಾ ಕೋಟಿನ್, ಸುನೀತಾ ಜೋಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net