ದೇವರಭೂಪುರದಲ್ಲಿ ವಾಂತಿಭೇದಿ, 9 ಜನ ಆಸ್ಪತ್ರೆಗೆ ದಾಖಲು

Lingasuguru Hospital Admit Vomiting People
Published on

ಲಿಂಗಸುಗೂರು: ತಾಲೂಕಿನ ದೇವರಭೂಪುರ ಗ್ರಾಮದಲ್ಲಿ ವಾಂತಿ-ಭೇದಿ ಹೆಚ್ಚಿದ್ದು, ಶನಿವಾರ 9 ಜನ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

2-3 ದಿನಗಳಿಂದ ವಾಂತಿ-ಭೇದಿ ಪ್ರಕರಣಗಳು ಕಂಡು ಬಂದಿದ್ದು, ಗ್ರಾಮದ ಹನುಮಂತಿ, ಬಸಮ್ಮ, ಮಲ್ಲಮ್ಮ, ದೇವಮ್ಮ, ಭೀಮಮ್ಮ, ಮಲ್ಲಮ್ಮ, ಹನುಮಂತ ಸೇರಿ 9 ಜನರು ಹೆಚ್ಚಿನ ಚಿಕಿತ್ಸೆಗಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗೆ ಸುರಿದ ಅಕಾಲಿಕ ಮಳೆಯ ನೀರು ಸೇದುಬಾವಿಯಲ್ಲಿ ಸೇರ್ಪಡೆಯಾದ ಪ್ರಯುಕ್ತ ನೀರು ಕಲುಷಿತಗೊಂಡಿದೆ. ಈ ನೀರು ಸೇವಿಸಿದ ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.

ಎಸಿ ರಾಜಶೇಖರ ಡಂಬಳ, ತಹಸೀಲ್ದಾರ್ ಚಾಮರಾಜ ಪಾಟೀಲ್, ಟಿಎಚ್‌ಒ ರುದ್ರಗೌಡ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಬಳಿಕ ದೇವರಭೂಪುರ ಗ್ರಾಮಕ್ಕೆ ತೆರಳಿ ಗ್ರಾಪಂ ಅಧಿಕಾರಿಗಳಿಗೆ ಶುದ್ಧ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net