

ಮಲೇಬೆನ್ನೂರು: ಕಳೆದ ಹಲವು ದಿನಗಳಿಂದ ಸುರಿದ ಮಳೆಗೆ ಸಮೀಪದ ದೇವರಬೆಳಕೆರೆ ಪಿಕಪ್ ಜಲಾಶಯ ತುಂಬಿ ಹರಿಯುತ್ತಿದ್ದು, ಜಲಾಶಯದ ಕಳೆಭಾಗದಲ್ಲಿ ಬಂಡೆಗಳ ನಡುವೆ ಹರಿಯುತ್ತಿರುವ ನೀರು ಜನರನ್ನು ಆಕರ್ಷಿಸುತ್ತಿದೆ.
ಪಿಕಪ್ ಭರ್ತಿಯಾದೊಡನೆ ಹೊರಗೆ ಬರುವ ಬಿಳಿ ಬಣ್ಣದ ನೀರು ಮುಂದೆ ದೊಡ್ಡ ಕಲ್ಲು ನಡುವೆ ಮೂರು ದೊಡ್ಡ ಕವಲುಗಳಾಗಿ ಸುಮಾರು ಒಂದು ಕಿಮೀ ವರೆಗೆ ಹರಿಸುತ್ತಿದ್ದು, ನಯನ ಮನೋಹರವಾಗಿದೆ. ಕಲ್ಲು, ಮುಳ್ಳುಗಳಿಂದ ಕೂಡಿರುವ ಮಾರ್ಗವಾಗಿರುವುದರಿಂದ ಹತ್ತಿರುವ ಹೋಗುವುದು ಸ್ವಲ್ಪ ಕಷ್ಟ. ಆದರೂ ಈ ದೃಶ್ಯ ನೋಡಲೆಂದು ಸ್ಥಳೀಯರು ಆಗಮಿಸುತ್ತಾರೆ.
ಮಳೆಗಾಲದಲ್ಲಿ ತುಂಬಿ ಹರಿಯುವ ಈ ಪ್ರದೇಶವನ್ನು ಪುಟ್ಟ ಪ್ರವಾಸಿತಾಣ ಮಾಡಬಹುದು. ಒಂದು ದಿನ ಪ್ರವಾಸಕ್ಕೆ ಸೂಕ್ತ ಸ್ಥಳ. ಜಿಲ್ಲಾ ಕೇಂದ್ರದಿಂದ 12 ಕಿಮೀ , ತಾಲೂಕು ಕೇಂದ್ರದಿಂದ 14 ಕಿಮೀ ಇದ್ದು, ಮಲೇಬೆನ್ನೂರಿನಿಂದ ಖಾಸಗಿ ಬಸ್ ಸೌಕರ್ಯವಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕಂಡಿಲ್ಲ. ಸಾಕಷ್ಟು ಸ್ಥಳವಿದ್ದು ಉದ್ಯಾನ, ದೋಣಿ ವಿಹಾರ ಕೇಂದ್ರ , ಮಕ್ಕಳಿಗೆ ಆಟವಾಡುವ ವ್ಯವಸ್ಥೆ ಮಾಡಬಹುದು. ಮೀನು ಸಾಕಣೆ ಕೇಂದ್ರ ನಿರ್ಮಾಣ ಮಾಡಿದರೆ ಮತ್ಸೋದ್ಯಮಕ್ಕೆ ಸಹಕಾರಿಯಾಗಲಿದೆ ಎಂದು ಚಂದ್ರು ಸಂಕ್ಷೀಪುರ ತಿಳಿಸಿದ್ದಾರೆ.
Devarabelakere, Pickup Reservoir, Malebennur, ದೇವರಬೆಳಕೆರೆ, ಪಿಕಪ್ ಜಲಾಶಯ, ಮಲೇಬೆನ್ನೂರು,