ವಿವಿಧೆಡೆ ಸಂತ ಸೇವಾಲಾಲರ ಜಯಂತ್ಯುತ್ಸವ

dhp-15-2a
Published on

ದೇವರಹಿಪ್ಪರಗಿ: ಪಟ್ಟಣದ ವಿವಿಧೆಡೆ ಬಂಜಾರ ಸಮುದಾಯದ ಕುಲಗುರು ಸಂತ ಸೇವಾಲಾಲರ 281ನೇ ಜಯಂತ್ಯುತ್ಸವ ನಡೆಯಿತು.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲರ ಜಯಂತಿ ಕಾರ್ಯಕ್ರಮದಲ್ಲಿ ಸೇವಾಲಾಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಪಪಂ ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ, ಬಂಜಾರ ಕ್ರಾಂತಿದಳದ ಜಿಲ್ಲಾ ಮಹಿಳಾ ಜಿಲ್ಲಾಧ್ಯಕ್ಷೆ ಕಸ್ತೂರಿಬಾಯಿ ದೊಡಮನಿ, ಬಂಜಾರ ಕ್ರಾಂತಿ ದಳದ ದೇವರಹಿಪ್ಪರಗಿ ತಾಲೂಕು ಅಧ್ಯಕ್ಷ ಸುಭಾಷ ಜಾಧವ, ಮುತ್ತು ಹಿರೇಮಠ, ಅರ್ಜುನ ರಾಠೋಡ, ಬಾಳು ರಾಠೋಡ, ಬದ್ದು ಕಾರಬಾರಿ, ವಿನೋದ ಚವಾಣ್, ಕುಬೇಂದ್ರ ಚವಾಣ್, ಕಾಶಿನಾಥ ಚವಾಣ್, ಲಾಲು ರಾಠೋಡ, ಭೀಮು ಚವಾಣ್ ಮತ್ತಿತರರಿದ್ದರು.

ಪೊಲೀಸ್ ಠಾಣೆ
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೇವರಹಿಪ್ಪರಗಿ ಪಿಎಸ್‌ಐ ರವಿ ಯಡಣ್ಣವರ ಸಂತ ಸೇವಾಲಾಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪೊಲೀಸ್ ಠಾಣೆ ಸಿಬ್ಬಂದಿ, ಬಂಜಾರ ಸಮುದಾಯದ ಪ್ರಮುಖರು, ಯುವಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ತಹಸೀಲ್ದಾರ್ ಕಚೇರಿ
ತಾಲೂಕು ಆಡಳಿತ ಪರವಾಗಿ ನಡೆದ ಸಂತ ಸೇವಾಲಾಲರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖಂಡ ಬಾಳು ರಾಠೋಡ ಮಾತನಾಡಿದರು.
ಪ್ರಭಾರ ತಹಸೀಲ್ದಾರ್ ಅರಕೇರಿ, ಬಂಜಾರ ಕ್ರಾಂತಿ ದಳದ ತಾಲೂಕು ಅಧ್ಯಕ್ಷ ಸುಭಾಷ ಜಾಧವ, ತಹಸೀಲ್ದಾರ್ ಕಚೇರಿ ಸಿಬ್ಬಂದಿ ಪೊಮ್ಮಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net