ಸಾಮಾಜಿಕ ಅಂತರ ಕಾಪಾಡಿ

DVN 29-1
Published on

ದೇವಣಗಾಂವ: ಕರೊನಾ ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಪಾಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಕಡಣಿ ಪರಮಾನಂದ ಭೋಗಲಿಂಗೇಶ್ವರ ಕಾಲೇಜು ಪ್ರಾಚಾರ್ಯ ರಮೇಶ ಗಂಗನಳ್ಳಿ ಹೇಳಿದರು.
ಇಲ್ಲಿನ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರೊನಾ ವೈರಸ್ ಎಂಬುದು ಸಾಂಕ್ರಾಮಿಕ ರೋಗ, ಇದನ್ನು ತಡೆಯಲು ಪ್ರತಿಯೊಬ್ಬರು ಜಾಗ್ರತೆ ವಹಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷರ ಪುತ್ರ ಪರಶುರಾಮ ಕುರುಮಲ್, ಜಿಪಂ ಮಾಜಿ ಸದಸ್ಯ ಕಾಶಿನಾಥ ಗಂಗನಳ್ಳಿ, ತಾಪಂ ಸದಸ್ಯ ಶಂಕರಲಿಂಗ ಕಡ್ಲೇವಾಡ, ಸಿದ್ದರಾಮ ಹಂಗರಗಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಎಸ್.ಐ. ಕಲಶೆಟ್ಟಿ, ಎಸ್.ಎಸ್. ಚಂಡಕಿ, ಸಿದ್ದಾರ್ಥ ಮೇಲಿನಕೇರಿ, ಗಾಲಿಬ ನಾಗಾವಿ, ನಾಗೇಶ ಹಿಂಚಗೇರಿ, ಶಿವಶರಣ ಗಂಗನಳ್ಳಿ, ಖಾಜೇಸಾಬ ಕಸಾಬ, ಬಾಬು ತೆಲ್ಲೂರ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net