ದೇವಾಂಗ ಸಮಾಜದಿಂದ ಪುರಸ್ಕಾರ

IMG_20241010_205708_511.jpg
Published on

ಹುಬ್ಬಳ್ಳಿ: ಇಲ್ಲಿಯ ದೇವಾಂಗ ಸಮಾಜ ಬನಶಂಕರಿ ಸೇವಾ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಇತ್ತೀಚೆಗೆ ನಡೆಯಿತು.

ಶರನ್ನವರಾತ್ರಿಯ ಪೂಜೆಯ ದಿನದಂದು ಆಯೋಜಿಸಿದ್ದ ಸಮಾರಂಭದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಅವರ ಜನ್ಮದಿನದ ಪ್ರಯುಕ್ತ ರಾಕೇಶ ಪಲ್ಲಾಟ, ರಾಜಕುಮಾರ ಕಾಮರಡ್ಡಿ ಹಾಗೂ ಭಾಗಣ್ಣ ಬಿ, ಅವರು ನೋಟ ಬುಕ್ ಗಳನ್ನು ವಿತರಿಸಿದರು.

ಅತಿಥಿಗಳಾಗಿದ್ದ ಕಿಮ್ಸ್ ಪ್ರಾಧ್ಯಾಪಕ ಡಾ. ಕಾಡಸಿದ್ದೇಶ್ವರ ಬ್ಯಾಕೋಡಿ, ನವೆಂಬರ್ 10ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸುವ ಬಗ್ಗೆ ಘೋಷಣೆ ಮಾಡಿದರು.

ಶಿಕ್ಷಣ ಕ್ಷೇತ್ರದ ಸಾಧಕರಾದ ಆರ್.ಟಿ. ಅಣ್ಣಿಗೇರಿ, ರಾವೇಂದ್ರ ಅರಷಣಗಿ, ಸತೀಶ ಗೌಡರ, ಭಾಸ್ಕರ ಗಡ್ಡಿ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷ ನಾಗೇಶ ಬಾಪರೆ ಅಧ್ಯಕ್ಷತೆ ವಹಿಸಿದ್ದರು.

ವೆಂಕಟರಮಣ ಚಿಟ್ಟಾ, ಮಂಜುನಾಥ ಚಿಂತಗಿಂಜಲ, ಶಾಂತಾ ಹಿರೇಮಠ, ಶಿವಗಂಗಾ ಮಾನಶೆಟ್ಟರ, ಹಿರಿಯರಾದ ವಿರುಪಾಕ್ಷಪ್ಪ ಚೌಡಾಪುರ, ರಮೇಶ ಬನ್ನಿಕೊಪ್ಪ, ಶಿವು ಕೊಳದೂರ, ರಾಮಣ್ಣ ಕಂಗೋರಿ, ನಾರಾಯಣ ಹೊನ್ನಳ್ಳಿ, ನಾಗರಾಜ ಕುದರಿ, ನಾಗರಾಜ ಕೊಳದೂರ ಇತರರು ಪಾಲ್ಗೊಂಡಿದ್ದರು.

ಸಂಕಣ್ಣ ಹೊನ್ನಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಸುರಪುರ, ಹರೀಶ ಹೊಸಮನಿ ಗೌಡರ, ವೀರೇಶ ದಂಡಾವತಿ, ಶ್ರೀರಾಮ ಕುದರಿಮೋತಿ ಅತಿಥಿಗಳ ಪರಿಚಯ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net