ದೇವನಹಳ್ಳಿಯೇ ಜಿಲ್ಲಾ ಕೇಂದ್ರವಾಗಬೇಕು, ಜಿಲ್ಲಾ ಕೇಂದ್ರ ಸ್ಥಳಾಂತರ ಹೋರಾಟ ಸಮಿತಿ ಪಟ್ಟು, ಸಚಿವರ ಗೊಂದಲದ ಹೇಳಿಕೆಗೆ ವಿರೋಧ

15 dhl Jilla horata samithi news- ph-3 A
Published on

ದೇವನಹಳ್ಳಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ದೇವನಹಳ್ಳಿ ತಾಲೂಕಿನಲ್ಲಿ ಜಿಲ್ಲಾಡಳಿತವಿದೆ. ಆದರೆ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಲು ಕೆಲವು ಜನಪ್ರತಿನಿಧಿಗಳು ಪ್ರಯತ್ನ ನಡೆಸುತ್ತಿರುವುದು ಖಂಡನಾರ್ಹ ಎಂದು ಜಿಲ್ಲಾ ಕೇಂದ್ರ ಸ್ಥಳಾಂತರ ಹೋರಾಟ ಸಮಿತಿ ಪ್ರಧಾನ ಸಂಚಾಕ ಬಿ.ಕೆ ಶಿವಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಕೇಂದ್ರ ಹೋರಾಟ ಸಮಿತಿಯ ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದರು. ಇತ್ತೀಚೆಗೆ ಉಸ್ತುವಾರಿ ಸಚಿವರು ಸೇರಿ ಹಲವರು ಗೊಂದಲದ ಹೇಳಿಕೆ ನೀಡುವ ಮೂಲಕ ಮುಗಿದ ಅಧ್ಯಾಯಕ್ಕೆ ಮತ್ತೆ ಮುಖಪುಟ ಬರೆಯಲು ಹೊರಟಿದ್ದಾರೆ ಎಂದರು.

ನಾಲ್ಕೂ ತಾಲೂಕಿನ ಗಡಿ ಗ್ರಾಮಗಳಿಗೆ ಸಮಾನ ಅಂತರವಿರುವ ಕೇಂದ್ರ ಸ್ಥಳವಾಗಿ ಬೀರಸಂದ್ರದಲ್ಲಿ ಜಿಲ್ಲಾಡಳಿತಭವನ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ದೇವನಹಳ್ಳಿಯೇ ಜಿಲ್ಲಾ ಕೇಂದ್ರವಾಗಿ ಮುಂದುವರಿಯಬೇಕು ಎಂದರು.

ಕರವೇ ಕನ್ನಡಿಗರ ಸಾರಥ್ಯದ ಜಿಲ್ಲಾ ಕಾರ್ಯಾಧ್ಯಕ್ಷ ವಿನೋದಕುಮಾರಗೌಡ ಮಾತನಾಡಿ, ಜಿಲ್ಲಾ ಕೇಂದ್ರದ ವಿಚಾರವಾಗಿ ಹಿಂದೆ ಸರ್ಕಾರ ತೆಗೆದುಕೊಂಡಿರುವ ತೀರ್ಮಾನವೇ ಅಂತಿಮವಾಗಬೇಕು ಎಂದರು.

ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಸಂಚಾಲಕ, ಕರವೇ ಕನ್ನಡಿಗರ ಸಾರಥ್ಯದ ರಾಜ್ಯ ಗೌರವಾಧ್ಯಕ್ಷ ಎನ್.ಚಂದ್ರಶೇಖರ್, ಜಿಲ್ಲಾಧ್ಯಕ್ಷ ಮುನಿರಾಜು ಅಪ್ಪಯ್ಯ, ತಾಲೂಕು ಅಧ್ಯಕ್ಷ ಆರ್.ವೆಂಕಟರಾಜು, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಬಾಬಜಾನ್, ಕಸಾಪ ತಾಲೂಕು ಅಧ್ಯಕ್ ಆರ್.ಕೆ.ನಂಜೇಗೌಡ, ಪ್ರಾಂಶುಪಾಲ ಬಿ.ಎನ್.ಕೃಷ್ಣಪ್ಪ, ಮಾನವ ಹಕ್ಕುಗಳ ಜಾಗೃತಿ ಸಮಿತಿ ತಾಲೂಕು ಅಧ್ಯಕ್ಷ ಎ.ಎಂ.ನಾರಾಯಣಸ್ವಾಮಿ, ರೈತಸಂಘದ ಜಿಲ್ಲಾಧ್ಯಕ್ಷ ಎಂ.ವೆಂಕಟೇಶ್, ತಾಲೂಕು ಅಧ್ಯಕ್ಷ ಆರ್.ಮುನಿಶಾಮಪ್ಪ, ಮಹಿಳಾ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಸುರ್ಯಕಲಾ ಮೂರ್ತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net